ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಲ್ವರು ನೀರುಪಾಲು

Rashmi Kasaragodu
Updated On : 17 May 2014, 12:53 pm

ಮಂಗಳೂರು: ಬೈಕಂಪಾಡಿ ಕೂರಿಕಟ್ಟ ಕಡಲ ತೀರದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ.   ಕೋರಿಕಟ್ಟ ನಿವಾಸಿಗಳಾದ ಗಿರೀಶ್ (7), ನವೀನ್ (8), ನೀಲಪ್ಪ (9), ಚಿದಾನಂದ (9) ಮೃತರು. ಕಡಲ ತೀರದಲ್ಲಿ ಆಟವಾಡುತ್ತಿದ್ದ ವೇಳೆ ನಾಲ್ವರು ಬಾಲಕರು ಕಡಲ ಬೃಹತ್ ಅಲೆಗಳಿಗೆ ಕೊಚ್ಚಿ ಹೋದರು. ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸಿದಾಗ ತಡವಾಗಿತ್ತು. ಮಕ್ಕಳ ಮೃತದೇಹಗಳು ಕಡಲ ತೀರಕ್ಕೆ ಬಂದಿವೆ. ಮೃತ ಬಾಲಕರು ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಮಕ್ಕಳು ಎಂದು ತಿಳಿದು ಬಂದಿದೆ. ಬಾಲಕರು ಸ್ಥಳೀಯ ಬೈಕಂಪಾಡಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರು. ಗಿರೀಶ್ ಮತ್ತು ನವೀನ್ ಹಾವೇರಿಯ ತಿರುಕಪ್ಪ ಎಂಬವರ ಮಕ್ಕಳು. ಚಿದಾನಂದ ಬಾದಾಮಿಯ ಜಾಮಣ್ಣ ಎಂಬವ ಮಗ. ಮೃತ ಬಾಲಕ ನೆಲ್ಲಪ್ಪ ಜಿನ್ನಪ್ಪ ಎಂಬವರ ಮಗ. ಈಜಲು ತೆರಳಿದ ಐವರಲ್ಲಿ ಮಂಜುನಾಥ್‌ನನ್ನು ರಕ್ಷಿಸಲಾಗಿದೆ. ಸ್ಥಳೀಯ ಬಿಜೆಪಿ ಅಧ್ಯಕ್ಷ ಯೋಗೀಶ್, ಕಾರ್ಪೊರೇಟರ್ ರಘುವೀರ್, ನವೀನ್ ಕಾಂಚನ್, ರೋಶನ್ ಕುಂದರ್, ತಾರಾನಾಥ ಸಾಲ್ಯಾನ್, ಜೀವನ್ ರಕ್ಷಣೆ ಕಾರ್ಯಾಚರಣೆಗೆ ನೆರವಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement