ಪೂಜಾರಿ ದರ್ಶನವೇ ಆಗಲಿಲ್ಲ
ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಕೊನೆವರೆಗೂ ಮತ ಎಣಿಕೆ ಕೇಂದ್ರಕ್ಕೆ ಬರಲಿಲ್ಲ. ಬಿಜೆಪಿಯ ನಳಿನ್ ಕುಮಾರ್ ಕಟೀಲ್ ತಾವು ಮುನ್ನಡೆಯಲ್ಲಿರುವುದು ಸ್ಪಷ್ಟಗೊಂಡ ನಂತರ 11.15ಕ್ಕೆ ಆಗಮಿಸಿದರು. ಸೋತ ಸುದ್ದಿ ತಿಳಿಯುತ್ತಿದ್ದಂತೆ ಪೂಜಾರಿ ಸಂಪರ್ಕಕಕ್ಕೂ ಸಿಗಲಿಲ್ಲ!