ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೂರ್ವ ದ್ವೇಷ; ಮೂವರ ಮೇಲೆ ತಂಡ ಹಲ್ಲೆ

Mainashree
Updated On : 17 May 2014, 10:08 am

ಪುತ್ತೂರು: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮೂವರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ತಾಲೂಕಿನ ಬಲ್ನಾಡು ಗ್ರಾಮದ ವಿನಾಯಕ ನಗರ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
 ವಿನಾಯಕ ನಗರ ನಿವಾಸಿ ಗೋಪಾಲ ಸುವರ್ಣ (44), ಅವರ ಪತ್ನಿ ಯಶೋಧ (35) ಮತ್ತು ಪುತ್ರ ಮನೀಶ್ (15) ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಪ್ಪಳಿಗೆ ನಿವಾಸಿಗಳಾದ ಸುಲೈಮಾನ್, ಅಬ್ದುಲ್ಲ ಯಾನೆ ಹಸೈನಾರ್, ಇಬ್ರಾಹಿಂ ಬಾತಿಶ, ನವಾಝ್ ಮತ್ತು ತಂಡ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
 ಗಾಯಾಳು ಗೋಪಾಲ ಸುವರ್ಣ ಹೇಳುವಂತೆ, ಗುರುವಾರ ರಾತ್ರಿ ಮನೆಯಲ್ಲಿದ್ದಾಗ ನೆರೆಮನೆಯ ರಿಕ್ಷಾ ಚಾಲಕ ಸುಲೈಮಾನ್ “¬ÈÚß½ÆÇ ಮಾತನಾಡಲು ಇದೆ ಹೊರಗೆ ¶¬­’ ಎಂದು ಕರೆದರು. ಅದರಂತೆ ನಾನು ಹೊರಗೆ ಬಂದಾಗ ಸುಲೈಮಾನ್ ಸಹಿತ ಸುಮಾರು 20 ಮಂದಿಯ ತಂಡ ಬೀದಿ ದೀಪವನ್ನು ನಂದಿಸಿ ಬ್ಯಾಟ್, ವಿಕೆಟ್ ಹಾಗೂ ದೊಣ್ಣೆಗಳಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಹೊರ ಬಂದ ಪತ್ನಿ ಹಾಗೂ ಪುತ್ರನ ಮೇಲೂ ಹಲ್ಲೆ ನಡೆಸಿದ್ದಾರೆ. ಪೂರ್ವ ದ್ವೇಷದಿಂದ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
 ಕಳೆದ ಮಾ. 27ರಂದು ಬಪ್ಪಳಿಗೆ ಸಮೀಪದ ಗುಂಪೆದಕಲ್ಲು ಎಂಬಲ್ಲಿ ಗೋಪಾಲ ಸುವರ್ಣ ಅವರು ಕಾರು ನಿಲ್ಲಿಸಿದ ಸಂದರ್ಭ ಅಂಗಡಿಗೆ ಧೂಳು ಹಾರಿದ ವಿಚಾರಕ್ಕೆ ಸಂಬಂಧಿಸಿ ಅಂಗಡಿ ಮಾಲಿಕ ಬಪ್ಪಳಿಗೆ ನಿವಾಸಿ ಮುಸ್ತಫಾ ಮತ್ತು ಗೋಪಾಲ ಸುವರ್ಣರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿತ್ತು. ಇದರಿಂದಾಗಿ ಗೋಪಾಲ ಸುವರ್ಣ ಮತ್ತು ಮುಸ್ತಫಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಘಟನೆಯ ದ್ವೇಷದ ಹಿನ್ನೆಲೆಯಲ್ಲಿ ಇದೀಗ ಗೋಪಾಲ ಸುವರ್ಣ ಮತ್ತು ಕುಟುಂಬದ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಆಸ್ಪತ್ರೆಗೆ ಡಿವೈಎಸ್ಪಿ ಎಚ್.ಡಿ. ಮೆಂಡೋನ್ಸಾ, ನಗರ ಠಾಣೆ ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ, ಗ್ರಾಮಾಂತರ ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ನಗರ ಠಾಣೆ ಎಸ್‌ಐ ರಫೀಕ್, ಗ್ರಾಮಾಂತರ ಠಾಣೆ ಎಸ್‌ಐ ಜಗದೀಶ್ ರೆಡ್ಡಿ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 ಘಟನೆಯ ಮಾಹಿತಿ ಪಡೆದ ಸಂಸದ ನಳಿನ್ ಕುಮಾರ್ ಕಟೀಲು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇವು ವಿಚಾರಿಸಿದರು. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಎಸ್‌ಐಗೆ ಸೂಚಿಸಿದರು.
ಮೂವರ ಬಂಧನ: ಆರೋಪಿಗಳಾದ  ಬಲ್ನಾಡ್‌ನ ಅಬ್ದುಲ್ ಹಮೀದ್, ಇಬ್ರಾಹಿಂ ಬಾತಿಶ ಮತ್ತು ನವಾಝ್ ಎಂಬವರನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement