ಶ್ರೀ ವಿಶ್ವನಾಥ ದೇವಳಕ್ಕೆ ನೆರವು: ಚಂದ್ರಶೇಖರ ಸ್ವಾಮೀಜಿ
ಮೂಲ್ಕಿ: ಅಧ್ಯಾತ್ಮದಿಂದ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿದ್ದು, ಧಾರ್ಮಿಕ ಚಿಂತನೆಯ ಮೂಲಕ ನಮ್ಮಲ್ಲಿ ಧಾರ್ಮಿಕ ಭಾವನೆ ಮೂಡಲು ಸಾಧ್ಯವಿದ್ದು ದೇವಳಗಳ ಅಭಿವೃದ್ಧಿಗೆ ತಮ್ಮ ಆಶ್ರಮದ ಮೂಲಕ ಸಹಕಾರ ನೀಡುವುದಾಗಿ ಬೆಂಗಳೂರಿನ ಆರ್.ಟಿ. ನಗರದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಪುನರೂರಿನ ಶ್ರೀ ವಿಶ್ವನಾಥ ದೇವಳದಲ್ಲಿ ಎರಡು ದಿನಗಳ ಕಾಲ ಜರುಗಲಿರುವ ರಾಶಿ ಪೂಜಾ ಮಹೋತ್ಸವಕ್ಕೆ ಗೇರುಕಟ್ಟೆಯ ತಮ್ಮ ಆಶ್ರಮದಿಂದ ಹೊರಟ ಹೊರೆ ಕಾಣಿಕೆ ಮೆರವಣೆಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೂಲ್ಕಿಯ ಕಾರ್ನಾಡಿನ ಗೇರುಕಟ್ಟೆಯಿಂದ ಪುನರೂರು ಶ್ರೀ ವಿಶ್ವನಾಥ ದೇವಳದ ವರೆಗೆ ವಾಹನಗಳ ಮೂಲಕ ಮೆರವಣೆಗೆಯಲ್ಲಿ ಸಾಗಿ ದೇವಳಕ್ಕೆ ಹೊರೆ ಕಾಣಿಕೆ ಹಾಗೂ ನಗದನ್ನು ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಸಮರ್ಪಿಸಿದರು. ಶಾಸಕ ಮೈದಿನ್ ಬಾವಾ, ಅನಿವಾಸಿ ಉದ್ಯಮಿ ನವೀನ್ ಕುಮಾರ್, ಪೊಲೀಸ್ ಅಧಿಕಾರಿ ವೆಂಕಟೇಶ್ ಪ್ರಸನ್ನ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿಲ್ಪಾಡಿ ಗೋವಿಂದ ಭಟ್, ಶಾರದ ಗೋವಿಂದ ಭಟ್, ರಜನಿ ಚಂದ್ರಶೇಖರ್, ಬೆಳಪು ದೇವಿಪ್ರಸಾದ್ ಶೆಟ್ಟಿ, ರೋಶನಿ ಭಟ್, ರಾಹುಲ್ ಭಟ್, ಮಧು ಆಚಾರ್ಯ, ಗಿರೀಶ್ ಕಾಮತ್ ಇದ್ದರು.