ಅಪಪ್ರಚಾರದಿಂದ ಪೂಜಾರಿ ಸೋಲು: ರಮಾನಾಥ ರೈ
ಮಂಗಳೂರು: ದಕ್ಷ, ಪ್ರಾಮಾಣಿಕ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸೋಲು ಅನುಭವಿಸಿರುವುದು ನೋವು ತಂದಿದೆ. ಸೋಲು, ಗೆಲವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ. ಗೆದ್ದ ನಳಿನ್ಕುಮಾರ್ಗೆ ಅಭಿನಂದಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
ಜನಾದೇಶವನ್ನು ಗೌರವಿಸುತ್ತೇವೆ. ದಕ್ಷಿಣ ಕನ್ನಡದಿಂದ ಗೋವಾ ಗಡಿ ವರೆಗೂ ಕರಾವಳಿಯಲ್ಲಿ ಕಾಂಗ್ರೆಸ್ ಸೋತಿದೆ. ಕೇವಲ ದಕ್ಷಿಣ ಕನ್ನಡದಲ್ಲಿ ಸೋತಿದ್ದರೆ ಏಕಾಂಗಿಯಾಗಿ ಹೊಣೆ ಹೊತ್ತುಕೊಳ್ಳಬಹುದಿತ್ತು. ಪಕ್ಷದ ಹೊಣೆಗಾರಿಕೆಯಲ್ಲಿ ಬದಲಾವಣೆ ಇಲ್ಲ ಎಂದರು. ಸಂಘಪರಿವಾರದವರು ಮನೆ ಮನೆಗೆ ಹೋಗಿ ಅಪಪ್ರಚಾರ ಮಾಡಿದರು. ಇದರಿಂದ ಪಕ್ಷಕ್ಕೆ ಸೋಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೆಪಿಸಿಸಿಕಾರ್ಯದರ್ಶಿ ಐವನ್ ಡಿಸೋಜ ಇದ್ದರು.