ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಲಿಪರಿಗೆ ಅರುವ ಪ್ರಶಸ್ತಿ

Lingaraj Badiger
Updated On : 19 May 2014, 12:02 pm

ಬೆಳ್ತಂಗಡಿ: ಪ್ರಕೃತಿಯ ಪರೋಪಕಾರದ ಸ್ವಭಾವದಿಂದ ಪರಿಸರ ಸುಂದರವಾದರೆ ಮನುಷ್ಯ ಮಾತ್ರ ತನ್ನ ಸ್ವಾರ್ಥ ಬುದ್ಧಿಯಿಂದ ಸಮಾಜವನ್ನು ಕಲುಷಿತಗೊಳಿಸುತ್ತಿದ್ದಾನೆ ಎಂದು ಒಡಿಯೂರಿನ ಶ್ರೀ ಸಾಧ್ವಿ ಮಾತಾನಂದಮಯಿ ವಿಷಾದಿಸಿದರು.
 ಅವರು ಶನಿವಾರ ರಾತ್ರಿ ಅಳದಂಗಡಿಯಲ್ಲಿ ಶ್ರೀ ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಏಳನೇ ವಾರ್ಷಿಕೋತ್ಸವ ಸಮಾರಂಭ, ಅರುವ ಪ್ರಶಸ್ತಿ ಪದಾನ, ಅಶಕ್ತ ಕಲಾವಿದ ನಿಧಿ ಸಮರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
 ಮನೋರಂಜನೆಯೊಂದಿಗೆ ಆತ್ಮರಂಜನೆಯನ್ನು ನೀಡುವ ಸಾಂಸ್ಕೃತಿಕ ಮಾಧ್ಯಮ ಯಕ್ಷಗಾನ. ಕಲಾವಿದರ ಕಲೆಯ ಆರಾಧನಾ ವೈಖರಿಯಿಂದ, ಸಮರ್ಪಣಾ ಮನೋಭಾವದಿಂದ ಯಕ್ಷಗಾನ ಸಂಪದ್ಭರಿತವಾಗಿದೆ. ಕಲಾವಿದರು ಕಲೆಯನ್ನು ರಕ್ಷಿಸಿದರೆ, ಕಲೆ ಕಲಾವಿದರನ್ನು ರಕ್ಷಿಸುತ್ತದೆ. ಈ ಬಾಂಧವ್ಯ ನಿರಂತರವಾಗಿ ಬೆಳೆಯಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಪ್ರತಾಪ ಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಲಿಪ ನಾರಾಯಣ ಭಾಗವತರಿಗೆ 'ಅರುವ' ಪ್ರಶಸ್ತಿಯನ್ನು ಹಾಗೂ ಸಿದ್ದಕಟ್ಟೆ ದಿ. ಚೆನ್ನಪ್ಪ ಶೆಟ್ಟಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಿಲಾಯಿತು. ಚೆನ್ನಪ್ಪ ಶೆಟ್ಟಿ ಪರವಾಗಿ ಅವರ ಪುತ್ರ ಭೂಷಣ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಮಧೂರಿನದ ಉದಯ ಕುಮಾರ್ ನಾವಡ ಅವರಿಗೆ ಅಶಕ್ತ ಕಲಾವಿದ ನಿಧಿ ಸಮರ್ಪಿಸಿ ಸನ್ಮಾನಿಸಲಾಯಿತು. ಉದ್ಯಮಿ ಮೂಲ್ಕಿಯ ಕಿಶೋರ್ ಕುಮಾರ್ ಶೆಟ್ಟಿ, ಅಳದಂಗಡಿ ಗ್ರಾಪಂ ಅಧ್ಯಕ್ಷೆ ಭಾರತಿ ರವಿ ಬಂಗೇರ, ಅರುವ ಕೊರಗಪ್ಪ ಶೆಟ್ಟಿ, ಪ್ರತಿಷ್ಠಾನದ ಉಪಾಧ್ಯಕ್ಷ ಕೆ. ಸದಾಶಿವ ಶೆಟ್ಟಿ ಇದ್ದರು. ಅಳದಂಗಡಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರತ್ನಾಕರ ಶೆಟ್ಟಿ ನಿರೂಪಿಸಿದರು. ಭಾರತಿ ಅಠವಳೆ ಪ್ರಾರ್ಥಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿದರು. ಬೆಳ್ತಂಗಡಿ ಗುರುದೇವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಅಭಿನಂದನಾ ಭಾಷಣ ಮಾಡಿದರು. ಅರುವ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಹಾಗೂ ಸಾರ್ವಜನಿಕ ಶನೈಶ್ವರ ಪೂಜಾ ಸಮಿತಿ ಸಹಕಾರದೊಂದಿ ಗೆ ಏಳನೇ ವರ್ಷದ ಉಚಿತ ಸಾಮೂಹಿಕ ಶ್ರೀ ಶನೈಶ್ವರ ಪೂಜೆ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement