ಸಾಯುವ ಮನ್ನ ಕನಸು ನನಸಾಗಿದೆ: ಬಾಬಾ ವಿಶ್ವನಾಥ್
ಮಂಗಳೂರು: ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿಯುತ್ತಾರೆ ಎಂದು 25 ವರ್ಷಗಳ ಹಿಂದೆಯೇ ಮೋದಿಗೆ ಹೇಳಿದ್ದೆ. ತಾನು ಸಾಯುವ ಮುನ್ನ ಮೋದಿ ಪ್ರಧಾನಿಯಾಗಿ ನೋಡುವ ಭಾಗ್ಯ ಲಭಿಸಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಹಳೆ ದೋಸ್ತಿ ಬಾಬಾ ವಿಶ್ವನಾಥ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಪಂಜಾಬ್, ಚಂಡಿಗಢದಲ್ಲಿ ಬಾಬಾ ಅವರು ನರೇಂದ್ರ ಮೋದಿ ಜತೆ 8 ವರ್ಷಗಳಿಗೂ ಹೆಚ್ಚು ಕಾಲ ಆರ್ಎಸ್ಎಸ್ನಲ್ಲಿ ಪ್ರಚಾರಕರಾಗಿ ದುಡಿದಿದ್ದರು. ಸೈಕಲ್ನಲ್ಲಿ ಜತೆಯಾಗಿಯೇ ಹೋಗುತ್ತಿದ್ದರು.
ಇಡೀ ದಿನ ಮೋದಿ ಧ್ಯಾನದಲ್ಲಿರುವ ವಿಶ್ವನಾಥ್, ಎರಡು ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು. ಕಿಡ್ನಿ ವೈಫಲ್ಯದಿಂದ ಎರಡು ಬಾರಿ ಕೋಮಾ ಸ್ಥಿತಿಗೂ ಹೋಗಿದ್ದರು. ಮೋದಿ ಗೆಲವಿನ ಸಾಧ್ಯತೆ ಹಿನ್ನೆಲೆಯಲ್ಲಿ ಮತ್ತಷ್ಟು ಎನರ್ಜಿಯೊಂದಿಗೆ ವಿಶ್ವನಾಥ್ ಚೇತರಿಸಿಕೊಳ್ಳುತ್ತಿದ್ದಾರೆ. 'ಪ್ರತಿ ಬಾರಿಯೂ ಮಂಗಳೂರಿಗೆ ಬಂದಾಗ ಕರೆಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ನನಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮೋದಿಯನ್ನು ಕಾಣಲು ಸಾಧ್ಯವಾಗಲಿಲ್ಲ. ಬಿಗಿ ಭದ್ರತೆ ಹಿನ್ನೆಲೆಯಲ್ಲಿ ನನ್ನ ಮನೆಗೆ ಬರಲು ಪಡೆಗಳು ಒಪ್ಪಿಲ್ಲ ಎನ್ನುವುದನ್ನು ಮೋದಿಯೇ ಹೇಳಿದ್ದರು' ಎನ್ನುತ್ತಾರೆ ವಿಶ್ವನಾಥ್.