ಸುಬ್ರಹ್ಮಣ್ಯ ಎಸ್ಎಸ್ಪಿಯು ಕಾಲೇಜು: ಶೇ. 97 ಫಲಿತಾಂಶ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ 2013-14ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.97 ಫಲಿತಾಂಶ ಲಭಿಸಿದೆ. 94 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 91 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 05 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ( ಡಿಸ್ಟಿಂಕ್ಷನ್)ಯಲ್ಲಿ ತೇರ್ಗಡೆಯಾದರೆ, 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 25 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 20 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಿಶ್ಚಿತಾ. ಎಂ.ಎನ್(579), ಸುಕುಮಾರ( 552), ಶ್ರೀವಲ್ಲಿ (543), ಸಹನಾ ಏನೆಕಲ್( 541), ತೃಪ್ತಿ. ಬಿ(541) ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಚಂದ್ರಶೇಖರ ಪೂಜಾರಿ ಆಯ್ಕೆ
ಬಂಟ್ವಾಳ: ಬಂಟ್ವಾಳ ವಕೀಲರ ಸಂಘ 2014-16 ಸಾಲಿನ ಅಧ್ಯಕ್ಷರಾಗಿ ನ್ಯಾಯವಾದಿ, ನೋಟರಿ ಯಂ. ಚಂದ್ರಶೇಖರ ಪೂಜಾರಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಸುರೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಚುನಾವಣಾಧಿಕಾರಿ ಡಿ.ಬಿ. ಅಬ್ದುಲ್ ಖಾದರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಕ್ರೀಡಾ ಕಾರ್ಯದರ್ಶಿ ರೋಲ್ ಅಲೆಕ್ಸ್ ಸಿಕ್ವೇರಾ ಆಯ್ಕೆಯಾಗಿದ್ದಾರೆ.