ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹದಗೆಟ್ಟ ಕಾನೂನು ವ್ಯವಸ್ಥೆ: ಎಸ್ಪಿಗೆ ಮನವಿ

Lingaraj Badiger
Updated On : 19 May 2014, 12:03 pm

ಮಂಗಳೂರು: ದ.ಕ.ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯವೈಫಲ್ಯ, ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ನಿರ್ವಹಣೆ, ಕಾನೂನು ಸುವ್ಯವಸ್ಥೆಯಲ್ಲಿ ಕಾಪಾಡುವಲ್ಲಿ ಅಸಮರ್ಥತೆ ಬಗ್ಗೆ ಬಿಜೆಪಿ ಜಿಲ್ಲಾ ಸಮಿತಿ ಶನಿವಾರ ಜಿಲ್ಲಾ ಎಸ್ಪಿ ಡಾ.ಶರಣಪ್ಪಗೆ ಮನವಿ ಸಲ್ಲಿಸಿದೆ. ಹಲವು ತಿಂಗಳಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ಬಗ್ಗೆ ಜನರು ನಂಬಿಕೆ ಕಳಕೊಳ್ಳುವಂತೆ ಆಗಿದೆ. ಜಿಲ್ಲಾದ್ಯಂತ ಗೋಹತ್ಯೆ ಮತ್ತು ಗೋಕಳ್ಳತನ ನಡೆಯುತ್ತಿದೆ. ದರೋಡೆ ಮತ್ತು ನಗದು ಕಳವು ಪ್ರಕರಣ ವರದಿಯಾಗುತ್ತಿದೆ. ಮಹಿಳಾ ದೌರ್ಜನ್ಯ ಹಾಗೂ ಅತ್ಯಾಚಾರ ನಡೆಯುತ್ತಿದೆ. ತರುಣಿಯರ ನಾಪತ್ತೆ ಪ್ರಕರಣ, ಕೋಮು ಸೌಹಾರ್ದತೆ ಹಾಳು ಮಾಡುವ ಘಟನೆ, ರಾಜಕೀಯ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಕೇಸು, ಟೋಲ್ ಸಂಗ್ರಹ ಕೇಂದ್ರಗಳ ಮೇಲೆ ದಾಳಿ, ಜಿಲ್ಲೆ ಉಗ್ರರ ತಾಣವಾಗುತ್ತಿರುವ ಪ್ರಕರಣಗಳು ನಡೆಯುತ್ತಿದೆ. ರಾಜಕೀಯ ಒತ್ತಡದಿಂದ ಇದನ್ನು ನಿರ್ಲಕ್ಷಿಸಿದಲ್ಲಿ ಮುಂದಿನ ಎಲ್ಲ ಅನಾಹುತಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗಬೇಕಾದೀತು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದೆ. ವಿಧಾನ ಪರಿಷತ್ತು ಸದಸ್ಯರಾದ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಶಾಸಕ ಅಂಗಾರ, ಮಾಜಿ ಸಚಿವ ಕೃಷ್ಣ ಪಾಲೇಮಾರ್, ವಿಧಾನಸಭೆ ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಮುಖಂಡರಾದ ಸುಲೋಚನಾ ಭಟ್, ಸತೀಶ್ ಪ್ರಭು, ಶಾಂತಾ ಆರ್, ಸಂಜಯ ಪ್ರಭು, ಕಸ್ತೂರಿ ಪಂಜ, ಆನಂದ ಬಂಟ್ವಾಳ ಮತ್ತಿತರರಿದ್ದರು.
ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ
ಮಂಗಳೂರು: ವಿದ್ಯುತ್ ಕಂಪನಿಗಳು ವಿದ್ಯುತ್ ದರ ಹೆಚ್ಚಿಸಿರುವ ಕ್ರಮವನ್ನು ಗ್ಯಾಸ್ ಮತ್ತು ಬಳಕೆದಾರರ ವೇದಿಕೆ ಖಂಡಿಸಿದೆ. ಇಲಾಖೆಗೆ ನಷ್ಟವಾಗುತ್ತಿದ್ದರೆ ಗ್ರಾಹಕರಿಗೆ ಲಾಭ, ನಷ್ಟಗಳ ಸಮಗ್ರ ವರದಿಯ ಶ್ವೇತಪತ್ರ ಹೊರಡಿಸಬೇಕು. ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿದರೆ ನಷ್ಠ ಪ್ರಮಾಣವನ್ನು ಕಡಿಮೆ ಮಾಡಬಹುದು. ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದಿರುವ ಜನತೆಗೆ ವಿದ್ಯುತ್ ದರ ಹೆಚ್ಚಿಸುವ ಮೂಲಕ ಇನ್ನೊಂದು ಶಾಕ್ ನೀಡಿದಂತಾಗಿದೆ. ಇದರ ಹಿಂದೆ ಬಿಪಿಎಲ್ ಕಾರ್ಡ್‌ನಿಂದ ಜನರನ್ನು ವಂಚಿಸುವ ಷಡ್ಯಂತರ ಇದೆ. ಗ್ರಾಹಕರ ಹಿತದೃಷ್ಟಿಯಿಂದ ವಿದ್ಯುತ್ ದರ ಇಳಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ವೇದಿಕೆ ಅಧ್ಯಕ್ಷ ಧರ್ಮೇಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement