ಸುರತ್ಕಲ್ ಕ್ರಿಕೆಟ್ ಗಲಾಟೆ: ಪರಿಸ್ಥಿತಿ ನಿಯಂತ್ರಣಕ್ಕೆ
ಮಂಗಳೂರು: ಸುರತ್ಕಲ್ ಮೈದಗುರಿಯಲ್ಲಿ ಕ್ರಿಕೆಟ್ನಲ್ಲಿ ಉಂಟಾದ ಗಲಭೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, 5ಕ್ಕೂ ಹೆಚ್ಚು ವಾಹನಗಳನ್ನು ಪುಡಿಗಟ್ಟಲಾಗಿದೆ.
ಸೋಮನಾಥ ಮೂಲ್ಯ ಪಂದ್ಯ ನೋಡಲು ಬಂದಿದ್ದು, ಬೌಂಡರಿ ಬಳಿ ಚೆಂಡು ತಡೆದಿದ್ದ. ಇದಕ್ಕೆ ಆಟವಾಡುತ್ತಿದ್ದ ತಂಡದವರು ಅಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದರು. ನಿಸಾರ್, ಇರ್ಫಾನ್, ಇಸ್ಮಾಯಿಲ್, ಸಾದಿಕ್ ಮತ್ತು ರಫೀಕ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ದೂರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮನೋಜ್, ಕೋಕು, ಕಿರಣ್, ಮನಿಶ್, ಚೇತನ್ ಸ್ಕಾರ್ಪಿಯೋದಲ್ಲಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ಅಬೂಬಕರ್ ಮತ್ತು ಇಸ್ಮಾಯಿಲ್ ದೂರು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಕೆಎಸ್ಆರ್ಪಿ ತುಕಡಿಗಳನ್ನು ಕಳುಹಿಸಿದ್ದಾರೆ. ಗಲಭೆ ಹಬ್ಬದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಸುರತ್ಕಲ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.