ಕೋಳಿ ಸಾರು ಜಗಳ; ಪತಿ ಹತ್ಯೆ
ಚಿಕ್ಕಮಗಳೂರು: ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಂಜುನಾಥ್ (40) ಮೃತ ವ್ಯಕ್ತಿ. ತಾನು ಹೇಳಿದಂತೆ ಕೋಳಿ ಸಾರು ಮಾಡಿಲ್ಲವೆಂಬ ಕಾರಣಕ್ಕಾಗಿ ಮಂಜುನಾಥ್ ಮಗನಿಗೆ ಹೊಡೆದು, ನಂತರದಲ್ಲಿ ಪತ್ನಿ ಉಮಾ ಅವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದರು.
ಇದರಿಂದ ಕುಪಿತಗೊಂಡ ಉಮಾ, ಮಂಜುನಾಥನ ಕುತ್ತಿಗೆ ಹಿಂಭಾಗಕ್ಕೆ ಕತ್ತಿಯಿಂದ ಕಡಿದಿದ್ದು, ಆಗ ತೀವ್ರವಾಗಿ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾನೆ. ಆಲ್ದೂರು ಪೊಲೀಸರು ಉಮಾ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.