ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಾಂತಿ ಸುವ್ಯವಸ್ಥೆಗೆ ಆದ್ಯತೆ: ಐಜಿಪಿ ಅಮ್ರಿತ್ ಪಾಲ್

Vishwanath S
Updated On : 28 May 2014, 11:59 am

ಮಂಗಳೂರು: ಪಶ್ಚಿಮ ವಲಯ ಐಜಿಪಿಯಾಗಿ ಅಮ್ರಿತ್ ಪಾಲ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಮಾರ್ಚ್ ತಿಂಗಳಿಂದ ಹುದ್ದೆ ತೆರವಾಗಿತ್ತು. ಐಜಿಪಿ ಪ್ರತಾಪ್ ರೆಡ್ಡಿ ವರ್ಗವಾದ ಬಳಿಕ ಈ ಹುದ್ದೆಗೆ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಿಸಲಾಗಿತ್ತು ಆದರೆ, ಅವರು ಅಧಿಕಾರ ಸ್ವೀಕರಿಸಿರಲಿಲ್ಲ. ಕಮಿಷನರ್ ಆರ್.ಹಿತೇಂದ್ರ ಅವರು ಪ್ರಭಾರ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಮಧ್ಯಾಹ್ನ ಕಚೇರಿಗೆ ಆಗಮಿಸಿದ ಕಮಿಷನರ್ ಆರ್.ಹಿತೇಂದ್ರ, ಎಸ್ಪಿ ಶರಣಪ್ಪ ಎಸ್.ಡಿ., ಡಿವೈಎಸ್ಪಿ ಜಗನ್ನಾಥ ಟಿ.ಆರ್. ಇನ್ಸ್ಪೆಕ್ಟರ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಸ್ವಾಗತಿಸಿದರು.
ಅಧಿಕಾರಿ ಸ್ವೀಕರಿಸಿದ ಬಳಿಕ ಮಾತನಾಡಿದ ಅಮ್ರಿತ್ ಪಾಲ್, ಶಾಂತಿ ಸುವ್ಯವಸ್ಥೆ ಆದ್ಯ ಕರ್ತವ್ಯ. ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ಕಾಪಾಡುವ ಜತೆಗೆ ಇಲ್ಲಿನ ದುಡಿಯುತ್ತೇನೆ ಎಂದರು. ಅಮ್ರಿತ್ ಪಾಲ್ 1995 ಬ್ಯಾಚ್ ಐಪಿಎಸ್ ಅಧಿಕಾರಿ. ಬೀದರ್ ಬಾಲ್ಕಿ,  ಉಡುಪಿ , ಬಳ್ಳಾರಿಯಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ಆಂತರಿಕ ಭದ್ರತೆ ಡಿಐಜಿಯಾಗಿ ಬೆಂಗಳೂರಲ್ಲಿ ಕೆಲಸ ಮಾಡಿದ್ದರು. ಇದೀಗ ಐಜಿಪಿಯಾಗಿ ಮಂಗಳೂರಿಗೆ ಆಗಮಿಸಿದ್ದಾರೆ.
ಎಕ್ಸ್ಪರ್ಟ್ ಕಾಲೇಜಿಗೆ 8 ರ್ಯಾಂಕ್
ಮಂಗಳೂರು: ಈ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ನಗರದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ನಾಲ್ಕು ವಿಭಾಗಗಳ ಪ್ರಥಮ 10 ರ್ಯಾಂಕ್ಗಳಲ್ಲಿ 8 ರ್ಯಾಂಕ್ನ್ನು ಪಡೆದುಕೊಂಡಿದೆ.
ಮೆಡಿಕಲ್ ವಿಭಾಗದಲ್ಲಿ 3ನೇ, 7ನೇ, 8ನೇ ರ್ಯಾಂಕ್,  ಐಎಸ್ಎಂಎಚ್  ವಿಭಾಗದಲ್ಲಿ 3ನೇ, 5ನೇ, 9ನೇ ರ್ಯಾಂಕ್, ಎಂಜಿನಿಯರಿಂಗ್ನಲ್ಲಿ 9ನೇ ರ್ಯಾಂಕ್ ಹಾಗೂ ಆರ್ಕಿಟೆಕ್ಚರ್ನಲ್ಲಿ 8ನೇ ರ್ಯಾಂಕ್ನ್ನು ತನ್ನದಾಗಿಸಿದೆ. ಪ್ರಥಮ 50 ರ್ಯಾಂಕ್ಗಳಲ್ಲಿ 28 ರ್ಯಾಂಕ್ನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಮೆಡಿಕಲ್ ವಿಭಾಗದಲ್ಲಿ ಸೂರ್ಯ ವಿ.ಕೆ. 3ನೇ ರ್ಯಾಂಕ್ ಹಾಗೂ ರಕ್ಷಿತ್ ಕೆ. 8ನೇ ರ್ಯಾಂಕ್, ಎಂಜಿನಿಯರಿಂಗ್ನಲ್ಲಿ ಶ್ರೀನಿಧಿ ರಾವ್ 9ನೇ ರ್ಯಾಂಕ್, ಆರ್ಕಿಟೆಕ್ಚರ್ನಲ್ಲಿ ತನ್ವಿ ಜಗದೀಶ್ ಕಾರಿಯ 8ನೇ ರ್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್.ನಾಯಕ್ ಹಾಗೂ ಕಾರ್ಯದರ್ಶಿ ಉಷಾ ಪ್ರಭಾ ಎನ್. ನಾಯಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ಬಯಾಲಜಿ ವಿಭಾಗ ಮುಖ್ಯಸ್ಥ ಪ್ರದೀಪ್ ಕುಮಾರ್ ಎಂ. ಇದ್ದರು.
ಸಿಇಟಿ: ಸುಮಿತ್ಗೆ 3ನೇ ರ್ಯಾಂಕ್
ಮಂಗಳೂರು: ಶಾರದಾ ವಿದ್ಯಾಲಯದ ಪಿಯುಸಿ ವಿದ್ಯಾರ್ಥಿ, ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ಕೇಂದ್ರದ ವಿದ್ಯಾರ್ಥಿಯೂ ಆಗಿರುವ ಸುಮಿತ್ ಎಂಜಿನಿಯರಿಂಗ್ ವಿಭಾಗದಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ. ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ್ ಯೋಜನಾ ಸ್ಕೀಲರ್ಶಿಪ್ ಪರೀಕ್ಷೆಯಲ್ಲಿ ಈತ ಅಖಿಲ ಭಾರತ ಮಟ್ಟದಲ್ಲಿ ಏಳನೇ ರ್ಯಾಂಕ್ ಪಡೆದಿದ್ದಾರೆ. ಇವರು ಇತ್ತೀಚೆಗೆ ಮುಂಬೈನಲ್ಲಿ ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಂಪಿಯಾಡ್ ಆಯ್ಕೆ ಶಿಬಿರದಲ್ಲಿ ಮಂಗಳೂರನ್ನು ಪ್ರತಿನಿಧಿಸಿದ್ದರು. ಈ ಕೇಂದ್ರಕ್ಕೆ ಒಟ್ಟು 9 ರ್ಯಾಂಕ್ ಲಭಿಸಿದೆ ಎಂದು ಕೇಂದ್ರದ ಪ್ರಾಂಶುಪಾಲ ಸೆವರಿನ್ ರೊಸಾರಿಯೊ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement