ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಿಎಸ್ಟಿ ಮುಂದಿನ ವರ್ಷ ಜಾರಿಗೆ: ಅಜಯ್ ಸೇಠ್

Vishwanath S
Updated On : 29 May 2014, 11:18 am

ಮಂಗಳೂರು: ಮುಂದಿನ ವರ್ಷ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಪದ್ಧತಿ(ಜಿಎಸ್ಟಿ)ಜಾರಿಗೊಳ್ಳಲಿದೆ. ವಾರ್ಷಿಕ ರು. 50 ಲಕ್ಷ ಮೇಲ್ಪಟ್ಟು ವಹಿವಾಟು ಹೊಂದಿರುವ ವ್ಯಾಪಾರಿಗಳು ಇನ್ನು ಪ್ರತಿ ತಿಂಗಳ 20ರ ಮೊದಲು ಇಂಟರ್ನೆಟ್ ಮೂಲಕ ತಮ್ಮ ಖರೀದಿ ಮತ್ತು ಮಾರಾಟದ ವಿವರ ಸಲ್ಲಿಸಬೇಕು. ಇದನ್ನು ಜಾರಿಗೊಳಿಸುವಾಗ ಎಲ್ಲ ಪ್ರಯೋಜನ ವ್ಯಾಪಾರಿಗಳಿಗೆ ಲಭಿಸುತ್ತದೆ ಎಂದು ರಾಜ್ಯ ವಾಣಿಜ್ಯ ತೆರಿಗೆ ಆಯುಕ್ತ ಅಜಯ್ ಸೇಠ್ ಹೇಳಿದ್ದಾರೆ.
 ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಬುಧವಾರ ಉದ್ಯಮಿಗಳಿಗೆ 'ಖರೀದಿ ಮತ್ತು ಮಾರಾಟ ವಿವರಗಳ ಇ-ಅಪ್ಲೋಡಿಂಗ್' ವಿಚಾರದಲ್ಲಿ ಮಾತನಾಡಿದರು. ದೇಶದ ಅನೇಕ ರಾಜ್ಯಗಳಲ್ಲಿ ವಿವರ ಸಲ್ಲಿಕೆ ವ್ಯವಸ್ಥೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಸುಮಾರು 10 ಸಾವಿರ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ವಿವರ ಸಲ್ಲಿಸುತ್ತಿದ್ದಾರೆ. ಏ.1ರಿಂದ ವಿವರ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ಒಂದು ತಿಂಗಳ ಸ್ಥಳೀಯ ಹಾಗೂ ಅಂತಾರಾಜ್ಯ ಮಟ್ಟದ ಖರೀದಿ ಹಾಗೂ ಮಾರಾಟ ವಿವರಗಳನ್ನು ರಶೀದಿ ಸಹಿತ ತಿಂಗಳ 20ರೊಳಗೆ ಇಂಟರ್ನೆಟ್ ಮೂಲಕ ವ್ಯಾಟ್ ವೆಬ್ಸೈಟ್ಗೆ ಹೋಗಿ ವ್ಯಾಟ್ ಇ-ಫೈಲಿಂಗ್ ವಿಭಾಗದಲ್ಲಿ ಅಪ್ಲೋಡ್ ಮಾಡಬೇಕು. ಇದು ಕಡ್ಡಾಯವಾಗಿದ್ದು, ಇಲಾಖೆ ನಿರಂತರವಾಗಿ ವರ್ತಕರಿಗೆ ನೆರವು ನೀಡಲಿದೆ ಎಂದರು.
 ಈಗಾಗಲೇ ಕೆಲವು ವ್ಯಾಪಾರಸ್ಥರು ತಮ್ಮ ಅಕೌಂಟ್ನ್ನು ಕಂಪ್ಯೂಟರೀಕರಣ ಮಾಡಿದ್ದಾರೆ. ಅಂಥವರು ತಮ್ಮ ಖಾತೆ ವಿವರವನ್ನು ಎಕ್ಎಂಎಲ್ ಕಡತ ರೂಪದಲ್ಲಿ ಪಡೆದು ನಂತರ ವ್ಯಾಟ್ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಎಕ್ಎಲ್ ಕಡತವನ್ನು ಎಕ್ಸ್ಎಂಎಲ್ಗೆ ಪರಿವರ್ತಿಸಬೇಕು. ಇದಕ್ಕೆ ಉಚಿತ ಸಾಫ್ಟ್ವೇರ್ ಎನ್ಐಸಿಯಲ್ಲಿ ಲಭ್ಯವಿದೆ ಎಂದರು.
 ಹೊಸ ವ್ಯವಸ್ಥೆ ಜಾರಿಯಾದಾಗ ಸಮಸ್ಯೆ ನೀಗಿಸಲು ವ್ಯಾಟ್ ಕಚೇರಿಯಲ್ಲಿ ಹೆಲ್ಫ್ ಡೆಸ್ಕ್ ಆರಂಭಿಸಲಾಗುವುದು. ಇ-ಫೈಲಿಂಗ್ ಕುರಿತ ಸಂದೇಹ ಇಲ್ಲಿ ಪರಿಹರಿಸಬಹುದು ಎಂದರು. ಕೆಸಿಸಿಐ ಪ್ರಧಾನ ಕಾರ್ಯದರ್ಶಿ ರಾಮಮೋಹನ್ ಪೈ, ಕೋಶಾಧಿಕಾರಿ ಗಣೇಶ್ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement