'ಚಿಣ್ಣರ ಬಣ್ಣ' ಚಿತ್ರಕಲಾ ಪ್ರದರ್ಶನ ಇಂದಿನಿಂದ
ಮಂಗಳೂರು: ಅಶೋಕನಗರದ ಓಂಕಾರ್ ಸಾಯಿ ಡ್ರಾಯಿಂಗ್ ಕ್ಲಾಸ್ ವಿದ್ಯಾರ್ಥಿಗಳಿಂದ 31ರಂದು ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 'ಚಿಣ್ಣರ ಬಣ್ಣ' ಚಿತ್ರಕಲಾ ಪ್ರದರ್ಶನ ಏರ್ಪಡಲಿದೆ. ಸಂಜೆ 4.30ಕ್ಕೆ ಪ್ರಸಾದ್ ಆರ್ಟ್ ಗ್ಯಾಲರಿ ಸ್ಥಾಪಕಾಧ್ಯಕ್ಷ ಕೋಟಿ ಪ್ರಸಾದ್ ಆಳ್ವ ಉದ್ಘಾಟಿಸುವರು. 46 ಚಿಣ್ಣರ 66 ಕಲಾಕೃತಿಗಳು ಈ ಪ್ರದರ್ಶನದಲ್ಲಿ ಇರಲಿದೆ. ಕರಾವಳಿ ಚಿತ್ರಕಲಾ ಚಾವಡಿ ಅಧ್ಯಕ್ಷ ಶರತ್ ಹೊಳ್ಳ ಅಧ್ಯಕ್ಷತೆವಹಿಸುವರು. ಶಾಲಾ ಸಂಚಾಲಕ ಶ್ರೀನಿವಾಸ ರಾವ್, ವಕೀಲ ಕೆ.ಎಸ್.ಎನ್.ರಾಜೇಶ್ ಅತಿಥಿಯಾಗಿ ಪಾಲ್ಗೊಳ್ಳುವರು. ಜೂ.2ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6.30ರ ವರೆಗೆ ಕಲಾ ಪ್ರದರ್ಶನ ವೀಕ್ಷಣೆಗೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.