ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಜೆಪಿ ಗೆಲವು: ಹರಕೆ ಪಾದಯಾತ್ರೆ

Rashmi Kasaragodu
Updated On : 31 May 2014, 1:13 am

ಮಂಗಳೂರು: ನರೇಂದ್ರ ಮೋದಿ ಹಾಗೂ ನಳಿನ್ ಕುಮಾರ್ ಗೆಲವಿಗೆ ಹೇಳಿದ ಹರಕೆ ತೀರಿಸಲು ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಅವಿಕ್ಷಿತ್ ರೈ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿದರು.
 ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಶಾಲು ಹಾಕುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಮುಖಂಡರಾದ ಆಶಾ ತಿಮ್ಮಪ್ಪ, ಶೈಲಜಾ ಭಟ್, ಕಿಶೋರ್ ಕುಮಾರ್ ಮತ್ತಿತರರಿದ್ದರು.
 ಅವಿಕ್ಷಿತ್ ರೈ ಜತೆ ಯುವಮೋರ್ಚಾ ಕಾರ್ಯಕರ್ತರು ಪಾದಯಾತ್ರೆಗೆ  ಸಾಥ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement