ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೈರಿಕಟ್ಟೆ: ತಡೆಗೋಡೆ ಕುಸಿದು ರಸ್ತೆ ಸಂಚಾರ ಸ್ಥಗಿತ

Rashmi Kasaragodu
Updated On : 31 May 2014, 1:12 am

ವಿಟ್ಲ: ಬೈರಿಕಟ್ಟೆ ಎಂಬಲ್ಲಿ ಮನೆಗೆ ಕಟ್ಟಲಾದ 20 ಅಡಿ ಎತ್ತರಹಾಗೂ 100 ಅಡಿ ಅಗಲದ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಬೈರಿಕಟ್ಟೆ ನಿವಾಸಿ ಅಬೂಬಕ್ಕರ್ ಹೊಸತಾಗಿ ಕಟ್ಟುತ್ತಿರುವ ಮನೆಗೆ ಸುಮಾರು ರು. 8 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದ್ದರು. ಕಳೆದ 6 ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದ್ದರು. ಅದರ ಕಾಮಗಾರಿ ಮುಗಿಯುವ ಹಂತದಲ್ಲಿತ್ತು.
ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ದಿಢೀರನೆ ಈ ತಡೆಗೋಡೆ ಮುಕ್ಕಾಲು ಭಾಗ ಕುಸಿದು ಬಿದ್ದಿದೆ. ಪರಿಣಾಮ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಬೈರಿಕಟ್ಟೆಯಿಂದ ಕನ್ಯಾನ ಮೊದಲಾದ ಕಡೆಗಳಿಗೆ ತೆರಳುವ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಈ ತಡೆಗೋಡೆ ಬೀಳುವ ಸಂದರ್ಭ ಆಟೋರಿಕ್ಷಾ ಈ ರಸ್ತೆ ಮೂಲಕ ಹಾದು ಹೋಗಿದ್ದು, ಪವಾಡಸದೃಶ ರೀತಿಯಲ್ಲಿ ಅವರು ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜೆಸಿಬಿ ಯಂತ್ರಗಳು ಆಗಮಿಸಿದ್ದು, ರಸ್ತೆಗೆ ಬಿದ್ದಿರುವ ಕಲ್ಲುಗಳನ್ನು ತೆರವುಗೊಳಿಸಲಾಗಿದೆ.
 ರಸ್ತೆ ಕನ್ಯಾನ, ಮಿತ್ತನಡ್ಕ, ಕೇರಳದ ಆನೆಕಲ್ಲು, ಮಂಜೇಶ್ವರ, ಬಾಯಾರು, ಉಪ್ಪಳ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದೆ.
ಪ್ರಮುಖ ರಸ್ತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ವಾಹನಗಳು ಅಳಿಕೆ-ಅಂಗ್ರಿ ರಸ್ತೆ ಮೂಲಕ ಸಂಚಾರ ಮಾಡಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement