ಗಾಳಿ ಸುದ್ದಿಗೆ ಕಿವಿಗೊಡಬೇಡಿ: ಶಿರಿಯಣ್ಣವರ ಮನವಿ
ನವಲಗುಂದ: ವಿಧಾನಸಭಾ ಮತಕ್ಷೇತ್ರದಲ್ಲಿ ನಾಲ್ಕನೇ ಬಾರಿ ಚುನಾವಣೆ ಎದುರಿಸುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ನನಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು ಕೆಲವರು ನನ್ನ ಚಾರಿತ್ರ್ಯ ವಧೆ ಮಾಡುತ್ತಿದ್ದಾರೆ. ಹೀಗಾಗಿ, ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಕೆಜೆಪಿ ಅಭ್ಯರ್ಥಿ ಡಾ. ಆರ್.ಬಿ. ಶಿರಿಯಣ್ಣವರ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಬೇರೆಯವರಿಗೆ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ. ನಾನು ಸ್ಪರ್ಧೆಯಲ್ಲಿ ಮುಂ ಚೂಣಿಯಲ್ಲಿದ್ದೇನೆ. ಗೆಲವು ಖಚಿತ ಯಾವುದೇ ಸುಳ್ಳು ಸುದ್ದಿಗೆ ಕಿವಿ ಕೊಡಬೇಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಧುರೀಣರಾದ ಈಶ್ವರಚಂದ್ರ ಹೊಸಮನಿ, ಬಂಗಾರೇಶ ಹಿರೇಮಠ, ವಿ.ಟಿ. ಕರಿಸಕ್ರಣ್ಣವರ, ಅಶೋಕ ಮಜ್ಜಿಗುಡ್ಡ, ಕಲ್ಲಪ್ಪ ಬೆಳವಣಕಿ, ಕೆ.ಡಿ. ಆನೇಗುಂದಿ, ಆನಂದ ಹವಳಕೋಡ, ಅನೀಲ್ ಶಿದ್ರಾಮಶೆಟ್ಟರ, ಎಸ್.ಎಸ್. ನಿಡವಣಿ, ಎನ್.ಎಸ್. ನಿಡವಣಿ, ಬಸವರಾಜ ಹಳ್ಳದ, ಚನ್ನಪ್ಪ ಕೆಸರಪ್ಪನವರ, ನಾಗರಾಜ ಕಣವಿ ಇದ್ದರು.
ಅಭ್ಯರ್ಥಿಗಳಿಗೆ ನೋಟಿಸ್
ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ, ಜೆಡಿಎಸ್ನ ಇಸ್ಮಾಯಿಲ್ ತಮಟಗಾರ ಅವರು ಲೆಕ್ಕಪತ್ರದಲ್ಲಿ ನೂನ್ಯತೆ ಇದೆ. ಎಸ್ಯುಸಿಐ (ಎಂ) ಅಭ್ಯರ್ಥಿ ಎಚ್.ಜಿ. ದೇಸಾಯಿ ಅವರಿಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರಿಗೂ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಬಿಜೆಪಿ ಸೇರ್ಪಡೆ
ಧಾರವಾಡ: ಗಾಮನಗಟ್ಟಿ, ತಾರಿಹಾಳ ಗ್ರಾಮ ಸೇರಿದಂತೆ ಇಲ್ಲಿನ ವಾಜಪೇಯಿ ನಗರ, ಜನತಾ ಪ್ಲಾಟ್, ಆಶ್ರಯ ಯೋಜನೆ, ಗೌಡರ ಕಾಲನಿ, ಅರ್ಜಂಟ ಕಾಲನಿ, ಸ್ಮತಿ ನಗರ, ಬಸವೇಶ್ವರ ನಗರ, ರಾಮನಗರ, ನವನಗರದ ವಿವಿಧ ಪಕ್ಷದ ಕಾರ್ಯಕರ್ತರು ಈರಪ್ಪ ಸಂಗಮ್ಮನವರ ನೇತೃತ್ವದಲ್ಲಿ ಸೋಮವಾರ ಬಿಜೆಪಿ ಸೇರ್ಪಡೆಗೊಂಡರು. ಹನುಮಂತ ಗೌಡ, ಎಸ್.ಎಚ್. ಪುರೋಹಿತ, ಭಾರ್ಗವಿ ಭಟ್ಟ, ಪೂರ್ಣಿಮಾ ವೈದ್ಯಾ, ಲತಾ ಪುರೋಹಿತ ಹೀಗೆ ಅನೇಕರು ಸೇರ್ಪಡೆಗೊಂಡರು. ಅಜ್ಜಪ್ಪ ಹೊರಕೇರಿ, ಶಾಂತಪ್ಪ ದೇವಕ್ಕಿ, ನರೇಂದ್ರ ಕುಲಕರ್ಣಿ, ಎಸ್.ವೈ. ಕಳಸಣ್ಣವರ, ಶಿವರುದ್ರಗೌಡ ಕುಲಕರ್ಣಿ, ಚಂದ್ರಶೇಖರ ಮನಗುಂಡಿ, ಗಿರೀಶ ಸವಡಿ, ಮಲ್ಲಿಕಾರ್ಜುನ ಹೊರಕೇರಿ, ಹನುಮಂತ ಹರಿವಾಣ, ಶ್ರೀಧರ್ ಮುತ್ತಗಿ, ಡಾ.ಮಂಜುನಾಥ ತೇಗೂರ, ಸಂಗಪ್ಪ ಗುಳಗಣ್ಣವರ, ಗದಿಗೆಪ್ಪ ಹರಿವಾಳ, ಬಸಪ್ಪ ಕಟ್ಟಿ, ದಯಾನಂದ ಸಾಗರ ಇದ್ದರು.
ಕಾಂಗ್ರೆಸ್ಸಿಗೆ ಐಯುಎಂಎಲ್ ಬೆಂಬಲವಿಲ್ಲ
ಧಾರವಾಡ: ಏ. 27ರಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹೆಸರಿನಲ್ಲಿ ಪತ್ರಿಕಾ ಪ್ರಕಟಣೆ ನೀಡಿದ್ದು, ಸಂಘಟನೆಯು ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂಬ ಹೇಳಿಕೆ ಸುಳ್ಳು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಎಂ.ಎಸ್. ಇನಾಂದಾರ ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷಗಳ ಹಿಂದೆಯೇ ಪಕ್ಷದಿಂದ ಉಚ್ಚಾಟನೆಗೊಂಡ ಮಿರ್ಜಾ ಮೆಹದಿ ಕಾಂಗ್ರೆಸ್ ಪಕ್ಷದ ಆಹ್ವಾನದ ಮೇರೆಗೆ ಧಾರವಾಡಕ್ಕೆ ಆಗಮಿಸಿ ಸಂಘಟನೆ ಕಾಂಗ್ರೆಸ್ಗೆ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಇದು ಧಾರವಾಡದ ಮುಸ್ಲಿಂ ಬಾಂಧವರನ್ನು ದಾರಿ ತಪ್ಪಿಸುವ ಕೆಲಸ. ಮುಸ್ಲಿಮರನ್ನು ಓಲೈಸಿಕೊಳ್ಳುವ ವ್ಯವಸ್ಥಿತ ಪಿತೂರಿ ಇದು. ಅನ್ಯ ಪಕ್ಷಗಳಿಗೆ ಬೆಂಬಲ ನೀಡುವಂಥ ಯಾವುದೇ ತೀರ್ಮಾನವನ್ನು ಐಯುಎಂಎಲ್ ಕೈಗೊಂಡಿಲ್ಲ ಎಂದು ರಾಜ್ಯಾಧ್ಯಕ್ಷ ಎಂ.ಎಸ್. ಇನಾಂದಾರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಜೆಡಿಎಸ್ ಪ್ರಚಾರಕ್ಕೆ ನಟ ಸತ್ಯಜಿತ್
ಧಾರವಾಡ: ಧಾರವಾಡ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮೃತ ದೇಸಾಯಿ ಪರ ನಟ ಸತ್ಯಜಿತ್ ಅವರು ಇಲ್ಲಿನ ಮೂರರಿಂದ ಹತ್ತನೇ ವಾರ್ಡ್ನಲ್ಲಿ ಮಂಗಳವಾರ ಬೆಳಗ್ಗೆ ಮತ ಯಾಚಿಸಲಿದ್ದಾರೆ. ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ, ಮೋಹನ ಅರ್ಕಸಾಲಿ, ರಾಜೇಂದ್ರ ಗಾಮನಗಟ್ಟಿ, ಶಂಕರ ಈಳಗೇರ, ಭಂಡು ವಿಜಯ ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ತಿರಕಪ್ಪಾ ಜಮನಾಳ ತಿಳಿಸಿದ್ದಾರೆ.
ತಬ್ರೇಜ್ ಪ್ರಚಾರ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಸಂಶಿ ಅವರು ಸೋಮವಾರ ಉಣಕಲ್ನ ಹರಿಜನ ಕೇರಿಯಲ್ಲಿ ಮತ ಯಾಚನೆ ಮಾಡಿದರು. ಹರಿಜನ ಕೇರಿಯಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಿಲ್ಲ. ಚುನಾವಣೆಯಲ್ಲಿ ಆಯ್ಕೆಯಾದರೆ ಉಣಕಲ್ ಹರಿಜನ ಕೇರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ನನ್ನ ಮೊದಲ ಆದ್ಯತೆ ಎಂದು ತಬ್ರೇಜ್ ಸಂಶಿ ಹೇಳಿದರು. ತಬ್ರೇಜ್ ಅವರ ಚುನಾವಣೆ ಪಾದಯಾತ್ರೆಯಲ್ಲಿ ರಾಯನಗೌಡರು, ಶೇಖ, ಪೃಥ್ವಿರಾಜ್ ಭಾಸ್ಕರ್, ಬಸವರಾಜ ಜುಂಜನ್ನವರ, ಎಸ್.ಎಂ. ಪಾಟೀಲ, ರಘು ಭಿಷ್ಟನ್ನವರ, ಮಲ್ಲೇಶ ಸೊಣ್ಣದ ಇದ್ದರು.
ಎಂ.ಆರ್. ಪಾಟೀಲ ಚುನಾವಣಾ ಪ್ರಚಾರ
ಕುಂದಗೋಳ: ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಬೆಳಗಲಿ, ಬಮ್ಮಸಮುದ್ರ, ಪಾಳೆ ಕುರಡಿಕೆರಿ, ಇನಾಮವಿರಾಪುರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಮನೆಮನೆಗೆ ತೆರಳಿ ಮತಯಾಚಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಜಡಿ, ಬಿಜೆಪಿ ಅಧ್ಯಕ್ಷ ಬಸವನಗೌಡ್ರು, ಜಿಪಂ ಸದಸ್ಯ ಟಿ.ಜಿ. ಬಾಲಣ್ಣವರ, ಗೌರಮ್ಮ ಹರಿಜನ, ಶೇಕಣ್ಣ ಉಣಕಲ್ಲ, ಜಿ.ಎಫ್. ಅಣ್ಣಿಗೇರಿ, ಮಹೇಶಗೌಡ ಪಾಟೀಲ, ವಿಜಯಕುಮಾರ ಶೆಟ್ಟರ, ರಾಮಣ್ಣ ಸೊಟ್ಟಮನವರ, ರಾಮಣ್ಣ ಬೇಲಿ, ವೈ.ಎನ್. ಪಾಟೀಲ, ಬಸವರಾಜ ಅಣ್ಣಿಗೇರಿ, ಲೋಚನಪ್ಪ ಗುಳಲಕೇರಿ, ಜಿ.ಜಿ. ಹುಂಬಿ, ಬಸನಗೌಡ ಮರೆಪ್ಪಗೌಡ್ರ, ಸಿದ್ದಲಿಂಗಯ್ಯ ಹೊಸಮಠ, ಸುರೇಶ ಹಿಂಡಸಗೆರಿ, ಚಂದ್ರಶೇಖರ್ ಹನ್ನಿ, ಚಂದ್ರು ಪಾಟೀಲ, ಮುತ್ತು ಕೊಪ್ಪದ, ಶಿವಾನಂದ ಕೊಪ್ಪದ ಮತಯಾಚನೆ ಮಾಡಿದರು.
ದೇವಿಕೊಪ್ಪ: ನಿಂಬಣ್ಣವರ ಮತ ಯಾಚನೆ
ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಕೆಜೆಪಿ ಅಭ್ಯರ್ಥಿ ಸಿ.ಎಂ.ನಿಂಬಣ್ಣವರ ತಮ್ಮ ಬೆಂಬಲಿಗರೊಂದಿಗೆ ಮತ ಯಾಚಿಸಿದರು. ತಾಲೂಕು ಕೆಜೆಪಿ ಅಧ್ಯಕ್ಷ ಸದಾನಂದ ಚಿಂತಾಮಣಿ, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಗೀತಾ ಮರಲಿಂಗಣ್ಣವರ, ರುದ್ರಪ್ಪ ಟೊಂಗಳೆ, ಬಸವರಾಜ ಶೀಲವಂತರ, ಬಸವರಾಜ ಪರವಾಪುರ, ಹೂಲೆಪ್ಪ ಭೋವಿ, ಗಣೇಶ ಮೋತೆಣ್ಣವರ ಮುಂತಾದವರು ಪಾಲ್ಗೊಂಡಿದ್ದರು. ಗ್ರಾಮದ ಯಲ್ಲಪ್ಪ ಬೈಚವಾಡ, ಸೈಯದಸಾಬ ಮುಲ್ಲಾನವರ, ಫಕ್ಕೀರೇಶ ಹುಲಿಹೊಂಡ, ಯಲ್ಲಪ್ಪ ಬೇಗೂರ, ಪರಶುರಾಮ ಕಾಟಕರ, ಚನ್ನಪ್ಪ ಬಾಡದ, ಹನೀಫ್ ರೋಣದ, ಯಲ್ಲಪ್ಪ ಅವಣ್ಣವರ, ಶಿವಪ್ಪ ಹುಚ್ಚಪ್ಪನವರ ನಿಂಬಣ್ಣವರ ಸಮ್ಮುಖದಲ್ಲಿ ಕೆಜೆಪಿ ಸೇರಿದರು.