ಕರ್ನಾಟಕ ವಿವಿಯಲ್ಲಿನ್ನು ಸಂಜೆ ಹೊತ್ತಿನ ಎಂಬಿಎ ಕೋರ್ಸ್: ಕುಲಪತಿ
ಧಾರವಾಡ: ಬ್ಯಾಂಕ್, ಇನ್ಶೂರೆನ್ಸ್ ಹಾಗೂ ಸಣ್ಣ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗಾಗಿಯೇ ಕರ್ನಾಟಕ ವಿವಿ ಸಂಜೆ ಹೊತ್ತಿನ ಆಡಳಿತ ನಿರ್ವಹಣೆ(ಎಂಬಿಎ) ಕೋರ್ಸ್ ಆರಂಭಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಡಾ.ಎಚ್.ಬಿ. ವಾಲೀಕಾರ, 'ವಿವಿಯ ಧನಸಹಾಯ ಆಯೋಗವು ಪದವಿ ಮತ್ತು ಇತರೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲು ಯೋಜಿಸಲಾಗಿದೆ. ನಿಯಮದನ್ವಯ ವಿವಿಯು ಇತ್ತೀಚೆಗೆ ತನ್ನ ಕಾರ್ಯವ್ಯಾಪ್ತಿ ಮೀರಿ ಬೇರೆ ವಿವಿಯಲ್ಲಿ ಲಭ್ಯವಿರದ ಅನೇಕ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸಲಾಯಿತು. ಪ್ರಸ್ತುತ ಮೂರು ವರ್ಷದ ಎಂಬಿಎ ಕೋರ್ಸ್ನ್ನು ಸಂಜೆ ಹೊತ್ತು ಆರಂಭಿಸಲಾಗುತ್ತಿದೆ' ಎಂದರು. ಕೋರ್ಸ್ ಕುರಿತು ಕವಿವಿ ಕೌಸಾಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಡಾ. ಸುಭಾಷ್ ವಿವರ ನೀಡಿ, 'ಮೂರು ವರ್ಷಗಳ ಅವಧಿಯ ಕೋರ್ಸ್ ಇದಾಗಿದ್ದು, ವಾರ್ಷಿಕ 75 ಸಾವಿರ ಶುಲ್ಕ ಇರುತ್ತದೆ. 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಅರ್ಹತೆ ಮೇಲೆ ಆಯ್ಕೆ ಮಾಡಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಸಪ್ಟೆಂಬರ್ 4 ಕೊನೆ ದಿನವಿದ್ದು, 7ರಂದು ಆಯ್ಕೆ ಪರೀಕ್ಷೆ ನಡೆಯುತ್ತದೆ. 12ರಂದು ಫಲಿತಾಂಶ ಪ್ರಕಟಿಸಿ 23ರಂದು ತರಗತಿಗಳು ಆರಂಭವಾಗುತ್ತವೆ. ಮಾಹಿತಿಗಾಗಿ 0836 - 2741882 ಕರೆ ಮಾಡಬಹುದು ಎಂದು ತಿಳಿಸಿದರು.