ಸಿದ್ದು ಪ್ರಮಾಣ ವಚನ: ಸಂಭ್ರಮ
ನವಲಗುಂದ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ರಾಮಯ್ಯ ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಜೊತೆಗೆ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧುರೀಣರಾದ ರಾಮಣ್ಣ ಕಿಲಾರಿ, ಶಿವಪ್ಪ ಬ್ಯಾಹಟ್ಟಿ, ರಹೆಮಾನಸಾಬ ಧಾರವಾಡ, ಐ.ಡಿ. ಭಾಗವಾನ್, ವಿರೇಶ ದಾಡಿವಾವಿ, ಅಸ್ಕರಅಲಿ ಗೋವನಕೊಪ್ಪ, ಶಿವಾನಂದ ಬಸೆಗೊಣ್ಣವರ, ಮಂಜು ಜಾಧವ, ನಾಗರಾಜ ಭಜಂತ್ರಿ, ವಿಷ್ಟು ಮುದೋಳೆ, ನಾಗಲಿಂಗ ದೊಡಮನಿ, ದಿವಾನ್ಜಿ ಕಲಾಲ, ಯಲ್ಲಪ್ಪ ಭೋವಿ, ಎಮ್ ಎನ್. ಕರಿ, ಹನುಮಂತಪ್ಪ ಇಬ್ರಾಹಿಂಪುರ, ಸುಭಾನ ಬೇಪಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನೂತನ ಸಿಎಂಗೆ ಬಸವರಾಜ ದೇವರು ಅಭಿನಂಧನೆ
ಧಾರವಾಡ: ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಅವರಿಗೆ ತಾಲೂಕಿನ ಮನಸೂರ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಅಭಿನಂದನೆ ಸಲ್ಲಿದ್ದಾರೆ. ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿ, ಶೋಷಿತ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದವರು ಸಿದ್ದರಾಮಯ್ಯ. ರಾಜ್ಯದ ಸಾಮಾಜಿಕ ನ್ಯಾಯ ವಂಚಿತ ಸಮುದಾಯಗಳ ಅಭಿವೃದ್ಧಿ ಶ್ರಮಿಸಬೇಕು. ಅಲ್ಲದೇ, ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಸರ್ಕಾರ ಮುಂದಾಗಲಿ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.