ಎಲ್ಲ ಸಮಾಜದ ಏಳ್ಗೆಗೆ ಶ್ರಮಿಸಿ: ಪ್ರಸಾದ ಅಬ್ಬಯ್ಯ
ಹುಬ್ಬಳ್ಳಿ: ದಲಿತ ಸಮುದಾಯಕ್ಕಷ್ಟೆ ಅಲ್ಲದೆ ಎಲ್ಲ ಸಮುದಾಯಗಳಿಗೂ ದಲಿತ ಯುವಶಕ್ತಿ ಸಂಘ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಅಕ್ಕಿಹೊಂಡದ ಲೂತಿಮಠ ಬಿಲ್ಡಿಂಗ್ನಲ್ಲಿ ಕರ್ನಾಟಕ ದಲಿತ ಯುವಶಕ್ತಿ ಸಂಘದ ಧಾರವಾಡ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಸಮುದಾಯಗಳಿಗೆ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಸಂಘಟನೆ ಎತ್ತರಕ್ಕೆ ಬೆಳೆದು ಎಲ್ಲರ ವಿಶ್ವಾಸ, ನಂಬಿಕೆ ಗಳಿಸಬೇಕು ಎಂದು ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಪ್ರವೀಣ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಹು-ಧಾ ಮಹಾನಗರ ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ, ಮಾಜಿ ಸದಸ್ಯ ಯಮನೂರ ಗುಡಿಹಾಳ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮಂಜುನಾಥ ಲೂತಕಿಮಠ, ಕಾಂಗ್ರೆಸ್ನ ಮಹೇಶ ದಾಬಡೆ, ದಲಿತ ಯುವಶಕ್ತಿ ರಾಜ್ಯಾಧ್ಯಕ್ಷ ರಾಮಚಂದ್ರ ಸುಳ್ಳದ, ಬಸವರಾಜ ಅಳಗವಾಡಿ, ಕೃಷ್ಣಾ ಪವಾರ, ನಾಗರಾಜ ಹೆಬ್ಬಳ್ಳಿ, ತಿಪ್ಪೇಶ ಪೂಜಾರ, ಯಲ್ಲಪ್ಪ ಗಾಯಕವಾಡ, ಗಿರೀಶ ಕಾಲರವಾಡ, ಸಂಜು ನವಲಗುಂದ, ವಿನಾಯಕ ಬಸವ ಇನ್ನಿತರರು ಇದ್ದರು.
ಸಿಂಧೂರ ಹಾಲ್ನಲ್ಲಿ ಆಕರ್ಷಕ ಕಾಟನ್ ಎಕ್ಸ್ಪೋ
ಧಾರವಾಡ: ಭಾರತಿ ಕಲಾ ಸುರಭಿ ವತಿಯಿಂದ ಇಲ್ಲಿನ ಕೆ.ಸಿ. ಪಾರ್ಕ್ ಬಳಿ ಸಿಂಧೂರ ಹಾಲ್ನಲ್ಲಿ ಕಲಾ ಸುರಭಿ ಕಾಟನ್ ಎಕ್ಸ್ಪೋ ವಸ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.
ದೇಶದ ಎಲ್ಲ ಕರಕುಶಲ ವಸ್ತುಗಳ ಹಾಗೂ ಕಾರ್ಖಾನೆಯಿಂದ ನೇರವಾಗಿ ಆಮದು ಮಾಡಿಕೊಂಡು ಹತ್ತು ಸಾವಿರಕ್ಕೂ ಮೇಲ್ಪಟ್ಟ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಈ ಮೇಳ ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ನಡೆಯುತ್ತಿದ್ದು, ಆಂಧ್ರದ ಮುತ್ತಿನ ಆಭರಣ, ರಾಜಸ್ಥಾನದ ಚಾಂದಿನಿ ಸೂಟ್, ಚನಿಯಾ ಚೋಲಿ ಸ್ಕರ್ಟ್, ಹ್ಯಾಂಡ್ ವರ್ಕ್ ಡ್ರೆಸ್ ಮಟೀರಿಯಲ್, ಎಕ್ಸ್ಪೋರ್ಟ್ ಬ್ಯಾಗ್, ಸೂರತ್ ಸೀರೆಗಳು, ಫ್ಯಾನ್ಸಿ ಜ್ಯುವೆಲರ್ಗಳು, ಕಾಟನ್ ಶರ್ಟ್, ಸೀರೆ ಸೇರಿದಂತೆ ಇನ್ನು ಅನೇಕ ವಸ್ತುಗಳ ಪ್ರದರ್ಶನವಿದೆ. ಮೇಳದಲ್ಲಿ ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಅವಶ್ಯಕ ಇರುವ ಅನೇಕ ವಸ್ತುಗಳಿವೆ. ಅಲ್ಲದೆ, ಕಟ್ಟಿಗೆಯಿಂದ ತಯಾರಿಸಿದ ಗೃಹಪಯೋಗಿ ವಸ್ತುಗಳಿದ್ದು, ಧಾರವಾಡದ ಜನತೆ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆ ತಿಳಿಸಿದೆ.