ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಲಂಚ ಸ್ವೀಕರಿಸಿದ ನೌಕರನಿಗೆ ಶಿಕ್ಷೆ

Srinivasa Murthy VN
Updated On : 25 Sept 2013, 1:09 am

ಧಾರವಾಡ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದ ದ್ವಿತೀಯ ದರ್ಜೆ ಸಹಾಯಕನೊಬ್ಬನಿಗೆ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಧಾರವಾಡದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ದ್ವಿತಿಯ ದರ್ಜೆ ಸಹಾಯಕ ಕಾಶಿನಾಥ ಮಹಾಂತಪ್ಪ ಸಜ್ಜನಗೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ ಒಂದು ವರ್ಷ ಸಾಧಾರಣ ಶಿಕ್ಷೆ ಹಾಗೂ 2,500 ದಂಡ ವಿಧಿಸಲಾಗಿದೆ. ತಂಡ ಕಟ್ಟಲು ತಪ್ಪಿದರೆ 2 ತಿಂಗಳು ಶಿಕ್ಷೆ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಒಂದು ವರ್ಷ ಸಾಧಾರಣ ಶಿಕ್ಷೆ ಹಾಗೂ 2500 ದಂಡ, ತಪ್ಪಿದಲ್ಲಿ 2 ತಿಂಗಳು ಸಾಧಾರಣ ಶಿಕ್ಷೆ ವಿಧಿಸಿದೆ.
ಅಮಿತ ಶಿವಬಸಯ್ಯ ಹಿರೇಮಠ ಎಂಬವರಿಂದ ಕಾಶಿನಾಥ ಸಜ್ಜನ ಹಾಗೂ ಇದೇ ಕಚೇರಿಯ ಅಧೀಕ್ಷಕ ದಿಗಂಬರ ಶಂಕರೆಪ್ಪ ಕರಿಗುದರಿ ಅವರು 500 ಲಂಚ ಕೇಳಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನನ್ವಯ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
ಕರ್ನಾಟಕ ಲೋಕಾಯುಕ್ತ ಧಾರವಾಡದ ಪೊಲೀಸ್ ನಿರೀಕ್ಷಕರಾಗಿದ್ದ ಆರ್.ಬಿ. ಹವಾಲ್ದಾರ್ ಮತ್ತು ಪೊಲೀಸ್ ನಿರೀಕ್ಷಕರಾಗಿದ್ದ ಶಾಂತಿನಾಥ ವಣ್ಣೂರ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಧಾರವಾಡ ವಿಭಾಗೀಯ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement