ಮೋದಿ ಟೀಕಿಸಿದರೆ ಮತ್ತೊಂದು ಜ್ಞಾನಪೀಠ ಬರುತ್ತದೆಯೇ?
ಧಾರವಾಡ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಯು.ಆರ್. ಅನಂತಮೂರ್ತಿ ಪ್ರಜ್ಞಾವಂತರು, ಹಿರಿಯರು. ಇವರು ವಿಶ್ಲೇಷಿಸುವ ವಿಚಾರಗಳು ಸಾಕಷ್ಟಿದ್ದು, ಏತಕ್ಕೆ ರಾಜಕೀಯದತ್ತ ಒಲವು ತೋರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪ್ರಶ್ನಿಸಿದರು.
ಬುಧವಾರ ಸುದ್ದಿಗಾರರದೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳೇ ಸಮೀಕ್ಷೆ ಮಾಡಿದ್ದು ಮೋದಿಗೆ ಶೇ. 63ರಷ್ಟು ಪರ ಬೆಂಬಲ ದೊರೆತಿದೆ. ದೇಶದ ಬಹುಜನ ಮೋದಿಯನ್ನು ಪ್ರಧಾನಮಂತ್ರಿ ಹುದ್ದೆಗೆ ಅರ್ಹ ವ್ಯಕ್ತಿ ಎಂದು ತಿಳಿಸಿದಾಗಿಯೂ ಅನಂತಮೂರ್ತಿ ಅವರು ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದು, ಈ ಟೀಕೆಯಿಂದ ಅನಂತಮೂರ್ತಿಗೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿ ಬರುತ್ತದೆ ಅಂದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದರು. ಅನಂತಮೂರ್ತಿ ಅವರು ಇಂದಿರಾಗಾಂಧಿ ಅವರನ್ನೂ ಟೀಕಿಸಿದ್ದು, ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅನಂತಮೂರ್ತಿಗಳು ಮೊದಲು ಯಾವ ಪಕ್ಷದವರು ಎಂದು ತಿಳಿಯಪಡಿಸಲಿ ಎಂದು ಸದಾನಂದಗೌಡರು ಸವಾಲು ಹಾಕಿದರು.