ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಕೃತಿ ಬಿಡುಗಡೆ

Srinivasa Murthy VN
Updated On : 3 Feb 2014, 11:57 am

ಧಾರವಾಡ: ಗುರು ಹಿರೇಮಠ ಅವರ ಕೇಂದ್ರ ತೆರಿಗೆ ಕಾನೂನುಗಳು ಕೃತಿ ಬಿಡುಗಡೆ ಸಮಾರಂಭ ಫೆ. 4ರಂದು ಸಂಜೆ 6:30ಕ್ಕೆ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ. ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ ಕೃತಿ ಬಿಡುಗಡೆಗೊಳಿಸುವರು. ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಅಧ್ಯಕ್ಷತೆ ವಹಿಸುವರು ಎಂದು ಕಾನೂನು ಮಂಟಪದ ಸಂಚಾಲಕ ಬಸವಪ್ರಭು ಹೊಸಕೇರಿ ತಿಳಿಸಿದ್ದಾರೆ.

ಇಂದು ಸ್ಮಾರಕ ಭವನ ಉದ್ಘಾಟನೆ ಕಾರ್ಯಕ್ರಮ
ಧಾರವಾಡ: ಬಸವ ಜಯಂತಿ ಆಚರಣೆಯ ಶತಮಾನೋತ್ಸವ ಸ್ಮಾರಕ ಭವನ ಉದ್ಘಾಟನೆ ಮತ್ತು ಲಿಂ. ಶಿವಾನಂದ ಮಹಾಸ್ವಾಮಿಗಳ ಸ್ಮರಣೋತ್ಸವ ಫೆ. 3ರಂದು ಸಂಜೆ 4 ಕ್ಕೆ ರಾಯಾಪುರದ ಎಸ್‌ಜೆಎಂವಿ ಮಹಾಂತ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಮಠದ ಅತಿಥಿಗೃಹದ ಶಂಕುಸ್ಥಾಪನೆ ಹಾಗೂ ಪರಮ ಪೂಜ್ಯರ, ಶರಣರ ಭಾವಚಿತ್ರ ಅನಾವರಣ ಹಾಗೂ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಚಿತ್ರದುರ್ಗ ಮುರುಘಾಮಠದ ಡಾ. ಮುರುಘಾಶರಣರು ಸ್ಮಾರಕ ಭವನ ಉದ್ಘಾಟಿಸುತ್ತಾರೆ. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸುತ್ತಾರೆ. ಎಸ್‌ಜೆಎಂ ವಿದ್ಯಾಪೀಠದ ಉಪಾಧ್ಯಕ್ಷ ಪ್ರೊ. ಎಸ್.ಎಚ್. ಪಟೇಲ ಆಶಯ ನುಡಿ ಸಲ್ಲಿಸುವರು. ವಿದ್ಯಾಪೀಠದ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಪ್ರಾಸ್ತಾವಿಕ ಮಾತನಾಡುವರು.

ಇಂದು ವಿಶೇಷ ಉಪನ್ಯಾಸ
ಧಾರವಾಡ: ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಫೆ. 3ರಂದು ಮಧ್ಯಾಹ್ನ 3ಕ್ಕೆ ಫ್ರಾಂಟಿಯರ್ಸ್ ಆಫ್ ಕ್ಯಾನ್ಸರ್ ಬಯೋಲಾಜಿ ಆ್ಯಂಡ್ ಮೊಲೆಕ್ಯೂಲರ್ ಬಯೋ-ಎಂಜಿನಿಯರಿಂಗ್ ಥೆರಾಪಿಕ್ ಅಪ್ರೋಚ್ ಕುರಿತು ವಿಶೇಷ ತಜ್ಞ ವೈದ್ಯ ಡಾ. ಅವಿನಾಶ ರಸಲಕರ ಉಪನ್ಯಾಸ ನೀಡಲಿದ್ದಾರೆ. ಡಾ. ಬಿ.ಆರ್. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಧಾರವಾಡ: ಇಂದು ಎಲ್‌ಐಸಿ ಸದಸ್ಯರ ಸಭೆ
ಧಾರವಾಡ: ಎಲ್‌ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವಸದಸ್ಯರ ವಾರ್ಷಿಕ ಸರ್ವಸಾಧಾರಣ ಸಭೆ ಫೆ. 3ರಂದು ಮಧ್ಯಾಹ್ನ 3.30ಕ್ಕೆ  ಎಲ್‌ಐಸಿ ವಿಭಾಗೀಯ ಕಚೇರಿಯ ಸಭಾಭವನದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸುವರು.

ಫುಟ್‌ಬಾಲ್ ಪಂದ್ಯಾವಳಿ
ಧಾರವಾಡ:  ಉತ್ತರ ಕರ್ನಾಟಕ ಕ್ರೀಡಾ ಅಕಾಡೆಮಿ ವತಿಯಿಂದ ಇಲ್ಲಿನ ಕೆಸಿಡಿ ಆಟದ ಮೈದಾನದಲ್ಲಿ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಯನ್ನು  ಫೆ. 8 ಹಾಗೂ 9ರಂದು ಆಯೋಜಿಸಲಾಗಿದೆ. ಆಸಕ್ತ ತಂಡಗಳು ಹೆಸರು ನೋಂದಾವಣಿಗೆ ಜ. 31ರೊಳಗೆ ಮೊಬೈಲ್ ಸಂಖ್ಯೆ 9916904828 ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಾರ್ಷಿಕ ಸ್ನೇಹ ಸಮ್ಮೇಳನ
ಧಾರವಾಡ: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಈಚೆಗೆ ನಡೆಯಿತು. ಸಿಎಸ್‌ಐ ವಾಣಿಜ್ಯ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಂಭು ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಬಿ.ಎಸ್. ಬಿಕ್ಕಣ್ಣವರ, ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಯು. ಪಾಟೀಲ,  ಆಡಳಿತ ಮಂಡಳಿ ಸದಸ್ಯ ಎಸ್.ಎಂ. ಅಗಡಿ, ಪ್ರಾಚಾರ್ಯ ಎಸ್.ಸಿ. ಕೊಟಗಿ, ಉಪನ್ಯಾಸಕ ಜಿ.ಜಿ. ಕರೇಗೌಡರ, ಸಿ.ಎಸ್.ರಾಯನಗೌಡರ ಮತ್ತಿತರರಿದ್ದರು.

ಅಧ್ಯಕ್ಷರಾಗಿ ಆಯ್ಕೆ
ಕುಂದಗೋಳ: ಯುವ ಕಾಂಗ್ರೆಸ್ ಸಮಿತಿ ತಾಲೂಕು ಅಧ್ಯಕ್ಷರಾಗಿ ಯಲಿವಾಳ ಗ್ರಾಮದ ಚಾಂದಪೀರ ಹಜರೇಸಾಬ ಬಂಕಾಪೂರ ಆಯ್ಕೆಯಾಗಿದ್ದಾರೆ.  ಇದೇ ರೀತಿಯಾಗಿ ಉಪಾಧ್ಯಕ್ಷರಾಗಿ ಬಸವರಾಜ ನಡುವಿನಹಳ್ಳಿ ಹಾಗೂ ಕಾರ್ಯದರ್ಶಿಯಾಗಿ ಗಿರೀಶ ಮುದಿಗೌಡ್ರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪದಾಧಿಕಾರಿಗಳ ಆಯ್ಕೆ
ಧಾರವಾಡ: ಭಾರತೀಯ ಮಕ್ಕಳ ವೈದ್ಯಕೀಯ ಶಾಸ್ತ್ರ ಸಂಸ್ಥೆ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಡಾ. ವಿನೋದ ರಟಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಮಕ್ಕಳ ವೈದ್ಯಕೀಯ ಶಾಸ್ತ್ರ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಟಿ.ಯು. ಸುಕುಮಾರನ್ ಸಂಸ್ಥೆಯ ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಡಾ. ಸುಧೀಂದ್ರಶಯನ, ಖಜಾಂಚಿಯಾಗಿ ಡಾ. ಶಿವಾನಂದ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಡಾ. ಮಹೇಶ ಪಾಟೀಲ, ಡಾ. ಎ.ವಿ. ಮನಿಯಾರ, ಡಾ. ಸವಿತಾ ನೀರಲಗಿ, ಡಾ. ರೇಣುಕಾ ದುಗ್ಗಾಣಿ, ಡಾ. ರವೀಂದ್ರ, ಡಾ. ಮಹೇಶ ಹೊಳೆಯಣ್ಣವರ ಅವರು ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.

ಅವಿರೋಧ ಆಯ್ಕೆ
ಕಲಘಟಗಿ: ತಾಲೂಕಿನ ಬೆಲವಂತರ ಗ್ರಾಪಂನ ನೂತನ ಅಧ್ಯಕ್ಷರಾಗಿ ಕಲ್ಲಪ್ಪ ಬಸವಣ್ಣೆಪ್ಪ ಮುತ್ತಗಿ ಅವಿರೋಧ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಗ್ರಾಪಂ ಸಭಾಭವನದಲ್ಲಿ ತಾಪಂ ಕಾರ್ಯನಿರ್ವಾಹಕಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 11 ಸದಸ್ಯರ ಪೈಕಿ 9 ಸದಸ್ಯರು ಪಾಲ್ಗೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮುತ್ತಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಾಪಂ ಅಧಿಕಾರಿ ಎಸ್.ಆರ್. ವಿರಕರ ತಿಳಿಸಿದ್ದಾರೆ.  

ಪುರುಷರ ಕಬಡ್ಡಿ
ಧಾರವಾಡ: ಇಲ್ಲಿನ ಅಂಜುಮನ್ ಕಾಲೇಜಿನ ಆಶ್ರಯದಲ್ಲಿ ಕವಿವಿ ಪ್ರಥಮ ವಲಯ ಪುರುಷರ ಕಬಡ್ಡಿ ಪಂದ್ಯಾವಳಿ ಫೆ. 10 ಮತ್ತು 11 ರಂದು ನಡೆಯಲಿದ್ದು, ಆಸಕ್ತ ತಂಡಗಳು ಫೆ. 8ರೊಳಗೆ ದೈಹಿಕ ನಿರ್ದೇಶಕ ಐ.ಆರ್. ಯಕ್ಕುಂಡಿ (ಮೊಸಂ 96866 71888) ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement