ಸಂಚಾಲಕರಾಗಿ ಕರ್ಲಟ್ಟಿ ನೇಮಕ
ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿಯ ಕಾನೂನು ಘಟಕದ ಧಾರವಾಡ ಜಿಲ್ಲಾ ಸಂಚಾಲಕರಾಗಿ ಗುರುಪಾದ ಕರ್ಲಟ್ಟಿ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಕಾನೂನು ಘಟಕದ ಸಂಚಾಲಕ ಎಂ. ವಿನೋದಕುಮಾರ್ ಅವರು ಪ್ರಕಟಣೆ ಮುಖಾಂತರ ಕರ್ಲಟ್ಟಿ ಅವರನ್ನು ನೇಮಕ ತಿಳಿಸಿದ್ದಾರೆ.
ಪುರಂದರ ಆರಾಧನೆ ಮುಕ್ತಾಯ
ಧಾರವಾಡ: ನಗರದ ಮಾಳಮಡ್ಡಿಯ ಮಂತ್ರಾಲಯ ರಾಘವೇಂದ್ರಮಠ ಶಾಖೆಯ ಪುರಂದರ ಮಂಟಪದಲ್ಲಿ ಪುರಂದರದಾಸರ ಆರಾಧನೆ ಜರುಗಿತು. ಈ ಸಂದರ್ಭದಲ್ಲಿ ಪಂಡಿತ ಗೋವಿಂದ ನವಲಗುಂದರಿಗೆ ವೇದಾಂತ ನಿಧಿ ಬಿರುದು ನೀಡಿ ಗೌರವಿಸಲಾಯಿತು. ಡಾ. ಪಿ.ಆರ್ ಛಬ್ಬಿ, ನಾಗರಾಜ, ಜಿ.ಡಿ. ಉಪಾಧ್ಯ, ಎಸ್.ಜಿ. ಖಾಸನೀಸ್, ಡಾ. ವಿ.ವಿ. ಮನಗೂಳಿ, ಗುರುರಾಜ ಕನಕಗಿರಿ, ವಿಜಯ ವಿಠಲಾಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಸಿ. ನಾಗರಾಜ ಕಾರ್ಯಕ್ರಮ ನಿರೂಪಿಸಿದರು.