ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎನ್ನೆಸ್ಸೆಸ್ ಶಿಬಿರ: ಉಪನ್ಯಾಸ

Srinivasa Murthy VN
Updated On : 5 Feb 2014, 12:20 pm

ಕಲಘಟಗಿ: ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದಾಗಿ ಶ್ರೀಸಾಮಾನ್ಯರಿಗೆ ಮೂಲ ಸೌಕರ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ ಎಂದು ಡಾ. ಚಂದ್ರಶೇಖರ ದೊರೆ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರಥಮ ದರ್ಜೆ ಸರ್ಕಾರಿ ಕಾಲೇಜ್ ವತಿಯಿಂದ ತಾಲೂಕಿನ ಸೂಳಿಕಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭ್ರಷ್ಟಾಚಾರದ ಎಲ್ಲ ಹಂತಗಳನ್ನು ಮೀರಿ ಆಡಳಿತ ನಡೆಸುತ್ತೀವೆ ಎಂದು ಕಿಡಿಕಾರಿದ ಅವರು, ಯುವಕರೆಲ್ಲರೂ ಒಗ್ಗಟ್ಟಾದ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯ ಎಂದರು. ಪ್ರಾಸ್ತಾವಿಕ ಮಾತನಾಡಿದ ಎನ್‌ಎಸ್‌ಎಸ್ ಅಧಿಕಾರಿ ಡಾ. ಸುಭಾಸ ನಾಟೇಕರ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ಮೆಟ್ಟಿ ನಿಂತು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಂಡು ಯುವಕರು ಕಾರ್ಯೋನ್ಮುಖರಾಗಬೇಕೆಂದರು. ದ್ಯಾಮಣ್ಣ ನೇಸರೇಕರ, ಬಸವಣ್ಣ ನೇಸರೇಕರ, ಸದಾಶಿವ ಬೂದಿಹಾಳ, ಮಂಜುನಾಥ ಗಾಣಿಗೇರ, ದ್ಯಾಮಣ್ಣ ಹುಗ್ಗಿ, ವೀರಣ್ಣ ದೊಣ್ಣಿ ಮತ್ತಿತರರಿದ್ದರು.

ಕಡಲೆಗೆ ಬೆಂಬಲ ಬೆಲೆ ನೀಡಲು ಆಗ್ರಹ
ಧಾರವಾಡ: ಬೆಲೆ ಕುಸಿತ ಕಂಡಿರುವ ಕಡಲೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಸೋಮವಾರ ಹುಬ್ಬಳ್ಳಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾಗಿರುವ ಕಡಲೆ ವಾಣಿಜ್ಯ ಬೆಳೆಯೂ ಹೌದು. ಕಳೆದ ಎರಡು ವಾರದ ಹಿಂದೆ ಕ್ವಿಂಟಾಲ್‌ಗೆ ರು. 4 ಸಾವಿರಕ್ಕೂ ಹೆಚ್ಚಿದ್ದ ಕಡಲೆ ಬೆಲೆ ಇದೀಗ ರು. 2500ಕ್ಕೆ ಕುಸಿದಿದೆ.  ಕೇಂದ್ರ ಸರ್ಕಾರ ಬೇಳೆ ಕಾಳುಗಳಿಗೆ ಬೆಂಬಲ ಬೆಲೆ ಘೋಷಿಸಿದ್ದು, ಕಡಲೆಗೂ ರು. 3,300 ನಿಗದಿ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ರು. 2,500ಕ್ಕೆ ಮಾರಾಟವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಕಡಲೆಗೆ ಕ್ವಿಂಟಾಲ್‌ಗೆ ಕನಿಷ್ಠ ರು. 3,500 ನೀಡಬೇಕು. ಈ ಕುರಿತು ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ರೈತರಾದ ಎಸ್.ಎಂ. ಹೊಸಮನಿ, ಜಿ.ಪಿ. ಕೆಂಚನಗೌಡ್ರ, ಶಂಕರಗೌಡ ಪಾಟೀಲ, ಬಸಪ್ಪ ನೂಲ್ವಿ, ಸೋಮನಗೌಡೋ ಪಾಟೀಲ, ನಿಂಗಪ್ಪ ಕರೆಣ್ಣವರ ಆಗ್ರಹಿಸಿದ್ದಾರೆ.

ಕಲಘಟಗಿಯಲ್ಲಿ ಸಾರಿಗೆ ಶಿಬಿರ ಪುನರಾರಂಭ
ಧಾರವಾಡ: ಸ್ಥಗಿತಗೊಳಿಸಿದ್ದ ಕಲಘಟಗಿಯ ಮಾಸಿಕ ಸಾರಿಗೆ ಶಿಬಿರವನ್ನು ಪ್ರತಿ ತಿಂಗಳ 28ರಂದು ನಡೆಸಲಾಗುವುದು. ಸಾರ್ವಜನಿಕರು ಈ ಶಿಬಿರದ ಉಪಯೋಗ ಪಡೆಯುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ. ಸಾಯಿಪ್ರಕಾಶ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement