ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮನಸೆಳೆದ ಕೃಷಿ ಯಂತ್ರೋಪಕರಣ ಪ್ರದರ್ಶನ

Srinivasa Murthy VN
Updated On : 5 Feb 2014, 12:21 pm

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 3
ಕೃಷಿಯಲ್ಲಿ ಯಾಂತ್ರಿಕತೆ ಪರಿಚಯಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ನಾನಾ ರೀತಿಯ ಕೃಷಿ ಮತ್ತು ಗೃಹೋಪಯೋಗಿ ಯಂತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.
ಪ್ರದರ್ಶನದಲ್ಲಿ ಸೌರಶಕ್ತಿ ಆಧಾರಿತ ಪಂಪ್‌ಸೆಟ್, ಬಿತ್ತನೆ ಯಂತ್ರ, ಕೀಟನಾಶಕ ಸಿಂಪರಣೆ ಯಂತ್ರ ಸೇರಿದಂತೆ ಗೃಹೋಪಯೋಗಿ ಯಂತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.
ಗೃಹಪಯೋಗಿ ಯಂತ್ರಗಳಲ್ಲಿ ಎಲ್ಲರ ಗಮನ ಸೆಳೆದದ್ದು ಪಲ್ವರೈಸರ್, ನೋಡುವುದಕ್ಕೆ ಸಣ್ಣ ಕಪಾಟಿನಂತೆ ಕಾಣುವ ಪಲ್ವರೈಸರ್ ಮಾಡುವ ಕೆಲಸ ಹಿಟ್ಟು ಮಾಡುವುದು. ಮನೆಗೆ ಬೇಕಾಗುವ ರವೆ, ಅರಿಷಿಣ, ಮಸಾಲೆ ಪದಾರ್ಥಗಳನ್ನು ಹಿಟ್ಟು ಮಾಡಿಕೊಳ್ಳಬಹುದು. ಜಾನುವಾರುಗಳಿಗೆ ನುಚ್ಚು ಮಾಡಿಕೊಳ್ಳಬಹುದು.
5 ಕೆಜಿ ಕಾಳುಗಳನ್ನು ಪುಡಿ ಮಾಡುವ ಸಾಮರ್ಥ್ಯ ಈ ಯಂತ್ರಕ್ಕಿದ್ದು, ಯಂತ್ರಕ್ಕೆ ಕಾಳುಗಳನ್ನು ಹಾಕಿ ಬಾಗಿಲು ಮುಚ್ಚಿದರೆ ಆಯಿತು. ಕಾಳು ಪುಡಿ ಮಾಡಿದ ನಂತರ ಕುಕ್ಕರ್‌ನಂತೆ ಮೂರು ಬಾರಿ ಸಿಳ್ಳೆ ಹಾಕುತ್ತದೆ. ಒಂದು ವೇಳೆ ಸಿಳ್ಳೆ ಹಾಕಿದ ನಂತರವೂ ಹಿಟ್ಟು ತೆಗೆಯದಿದ್ದಲ್ಲಿ ಯಂತ್ರ ತಾನಾಗಿಯೇ ಕೆಲಸ ನಿಲ್ಲಿಸುತ್ತದೆ. ವಿದ್ಯುತ್ ಮೇಲೆ ನಡೆಯುವ ಈ ಯಂತ್ರ ಒಂದು ಗಂಟೆ ಅವಧಿಯಲ್ಲಿ 8 ಕೆಜಿ ಹಿಟ್ಟು ಮತ್ತು 12 ಕೆಜಿ ನುಚ್ಚು ಸಿದ್ಧಪಡಿಸುತ್ತದೆ.
ಗದಗನ ಕಬಾಡಿ ಏಜೆನ್ಸಿ ಪಲ್ವರೈಸರ್ ಸಿದ್ಧಪಡಿಸಿದ್ದು, 1 ಎಚ್‌ಪಿ ಸಾಮರ್ಥ್ಯದ ಪಲ್ವರೈಸರ್ ಮಾರುಕಟ್ಟೆ ಬೆಲೆ ರು. 17,500 ಇದ್ದರೆ, ರೈತರಿಗೆ ರು. 8,500  ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುವುದು.
ಇದೇ ರೀತಿ 2ಎಚ್‌ಪಿ ಸಾಮರ್ಥ್ಯದ ಪಲ್ವರೈಸರ್‌ಗೆ ರು. 27,500  ಮಾರುಕಟ್ಟೆ ಬೆಲೆ ಇದ್ದರೆ, ರೈತರಿಗೆ   ರು. 13,600ಗೆ ಮಾರಾಟ ಮಾಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement