ಹುಬ್ಬಳ್ಳಿ: 8ರಂದು ರಾಜ್ಯಅಂಗವಿಕಲರಕ್ರಿಕೆಟ್ ತಂಡದ ಆಯ್ಕೆ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ವಿಕಲಚೇತನರ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಫೆ. 8ರಂದು ಬೆಳಗ್ಗೆ 9ಕ್ಕೆ ನಡೆಯಲಿದೆ.
ಅನಂತಪುರದಲ್ಲಿ ಫೆ. 21, 22, 23ರಂದು ದೈಹಿಕ ವಿಕಲಚೇತನರ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ತಂಡದ ಆಯ್ಕೆ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.
ಆಸಕ್ತ ಕ್ರೀಡಾಪಟುಗಳು ಕ್ರಿಕೆಟ್ ಸಮವಸ್ತ್ರ ಹಾಗೂ ವಿಕಲಚೇತನ ದಾಖಲೆ ಪ್ರತಿಯೊಂದಿಗೆ ಹಾಜರಾಗಬೇಕು. ಮಾಹಿತಿಗೆ ಶಿವಾನಂದ ಇಟಗಟ್ಟಿ (ಮೊಸಂ 93434 06139), ಪ್ರಕಾಶ ಹೊನ್ನವಾಡ (98808 31939) ಅಥವಾ ಮಹೇಶ ಅಗಳಿ (80503 46489) ಅವರನ್ನು ಸಂಪರ್ಕಿಸುವಂತೆ ರಾಜ್ಯ ಕ್ರಿಕೆಟ್ ಅಕಾಡೆಮಿ ದಕ್ಷಿಣ ವಲಯದ ಶಿವಾನಂದ ಗುಂಜಾಳ ತಿಳಿಸಿದ್ದಾರೆ.
ಇಂದು ಪ್ರತಿಭಟನೆ
ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಪಂ ವ್ಯಾಪ್ತಿ ಗ್ರಾಮಗಳನ್ನು ನವಲಗುಂದ ತಾಲೂಕಿನಲ್ಲೇ ಉಳಿಸುವಂತೆ ಆಗ್ರಹಿಸಿ ಫೆ. 5ರಂದು ಗ್ರಾಮಸ್ಥರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ. ಗುಡಿಸಾಗರ, ನಾಗನೂರ, ಸೂಟಕನಾಳ, ಕಡದಳ್ಳಿ ಗ್ರಾಮಗಳನ್ನು ಪ್ರಸ್ತಾವಿತ ಹೊಸ ಅಣ್ಣಿಗೇರಿ ತಾಲೂಕಿಗೆ ಒಳಪಡಿಸಲು ಸರ್ಕಾರ ಚಿಂತನೆ ನಡೆಸಿದ್ದರ ಹಿನ್ನೆಲೆಯಲ್ಲಿ ಇಲ್ಲಿನ ಲಾಲಮಾರುತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ 4 ಗ್ರಾಮಗಳನ್ನು ಅಣ್ಣಿಗೇರಿ ತಾಲೂಕಿಗೆ ಒಳಪಡಿಸಿದರೆ ನವಲಗುಂದ ಜನರಿಗೆ ಸಮಸ್ಯೆಯಾಗುತ್ತದೆ. ನವಲಗುಂದ ತಾಲೂಕಿನಲ್ಲೇ ಈ ಎಲ್ಲ ಗ್ರಾಮಗಳನ್ನು ಉಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಬಿ.ಎಸ್. ಉಳ್ಳಾಗಡ್ಡಿ, ಬಿ.ಪಿ. ಕುಲಕರ್ಣಿ, ಜಿ.ಎನ್. ಬಾಗೂರ, ಸುರೇಶ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.