ಹುಬ್ಬಳ್ಳಿಯಲ್ಲಿ ನಮೋ ಟೀ ಸ್ಟಾಲ್ ಉದ್ಘಾಟಿಸಿದ ಮಾಳವಿಕಾ ಅವಿನಾಶ
ಹುಬ್ಬಳ್ಳಿ: ಬಿಜೆಪಿ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್ ಹುಬ್ಬಳ್ಳಿ ದಾಜೀಬಾನ್ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದ ಹತ್ತಿರ ಭಾನುವಾರ ನಮೋ ಟೀ ಸ್ಟಾಲ್ ಉದ್ಘಾಟಿಸಿದರು. ಚಹಾ ಹಂಚಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದರು.