ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

250ಕ್ಕೂ ಹೆಚ್ಚು ಹಂದಿ ತೆರವು

Srinivasa Murthy VN
Updated On : 16 Jul 2014, 11:01 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 15
ಹಂದಿ ತೆರವು ಕಾರ್ಯಾಚರಣೆ ನಗರದಲ್ಲಿ ಮುಂದುವರೆದಿದ್ದು, 250ಕ್ಕೂ ಹೆಚ್ಚು ಹಂದಿಗಳನ್ನು ಮಂಗಳವಾರ ಹಿಡಿದು ಸಾಗಿಸಲಾಯಿತು. ಹಳೇ ಹುಬ್ಬಳ್ಳಿ ಪ್ರದೇಶದ ವಾರ್ಡ್ ನಂ. 63, 64 ಹಾಗೂ 65ರ ನೇಕಾರ ನಗರ, ಎಸ್.ಎಂ. ಕೃಷ್ಣ ಕಾಲನಿ, ರಣದಮ್ಮ ಕಾಲನಿ, ಹೂಗಾರ ಪ್ಲಾಟ್ ಮತ್ತಿತರೆಡೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹಂದಿಗಳನ್ನು ಹಿಡಿಯಲಾಯಿತು. ಚರಂಡಿಯಲ್ಲಿ ಮಲಗಿದ್ದ, ತ್ಯಾಜ್ಯದಲ್ಲಿ ಆಹಾರ ಹುಡುಕುತ್ತಿದ್ದ, ರಸ್ತೆ ಬದಿ ತಿರುಗಾಡುತ್ತಿದ್ದ ಹಂದಿಗಳನ್ನು ತುಮಕೂರಿನಿಂದ ಬಂದಿರುವ 50ಕ್ಕೂ ಹೆಚ್ಚು ಪರಿಣಿತರ ತಂಡ ಬಲೆ ಬೀಸಿ ಹಿಡಿಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹಿಡಿದ ಹಂದಿಗಳನ್ನು ಲಾರಿಗಳಲ್ಲಿ ತುಮಕೂರಿಗೆ ಸಾಗಿಸಲಾಯಿತು. ಮೇಯರ್ ಶಿವು ಹಿರೇಮಠ, ಪಾಲಿಕೆ ವೈದ್ಯಾಧಿಕಾರಿ ಡಾ೤ ಪ್ರಭು ಬಿರಾದಾರ ಹಾಜರಿದ್ದರು.

ಪರಿಸರ ಆಂದೋಲನಕ್ಕೆ ಉತ್ತಮ ಬೆಂಬಲ
ಧಾರವಾಡ:  ಮಹಾನಗರ ಸಮಗ್ರ ನಾಗರಿಕ ಸಕಾಲ ಪರಿಸರ ರಕ್ಷಣಾ ಆಂದೋಲನದ ಅಂಗವಾಗಿ 70ಕ್ಕೂ ಹೆಚ್ಚು ಸಂಘಟಣೆಗಳು ಹಮ್ಮಿಕೊಂಡಿದ್ದ ಸಹಿ ಸಂಗ್ರಹಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ಬರುತ್ತಿದೆ. ಘನ ತ್ಯಾಜ್ಯ (ಕಸ)ದ ಸಮರ್ಪಕ ವಿಲೇವಾರಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಹಂದಿಗಳ ಸಂಪೂರ್ಣ ಸ್ಥಳಾಂತರ, 40 ಮೈಕ್ರಾನ್ ಗಿಂತಲೂ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಭಂಧಿಸುವುದು ಹಾಗೂ ಧಾರವಾಡದಲ್ಲಿಯೇ ಆಡಳಿತಾತ್ಮಕ ನ್ಯಾಯಮಂಡಳಿ ಸ್ಥಾಪನೆ ಕುರಿತು ನಡೆಸುತ್ತಿರುವ ಸಹಿ ಸಂಗ್ರಹ ಕಾರ್ಯಕ್ರಮದ ಆಂದೋಲನಕ್ಕೆ ವ್ಯಾಪಕ ಬೆಂಬಲ ದೊರೆಯುತ್ತಿದೆ. 2ನೇ ದಿನದ ಅಂತ್ಯಕ್ಕೆ 10 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹಿಸಲಾಗಿದೆ. ಸ್ಕೋಪ್ ಸಂಸ್ಥೆಯ ಹಲವಾರು ಕಾರ್ಯಕರ್ತರು ನಗರದ ವಿವೇಕಾನಂದ ವೃತ್ತ, ಟಕಾರೆ ರಸ್ತೆ, ಸುಭಾಸ ರಸ್ತೆ, ಹಿಂದಿ ಪ್ರಚಾರ ಸಭಾ ವೃತ್ತ ಹೀಗೆ ಹವಾರು ಕಡೆ ಸಾರ್ವಜನಿಕರಿಗೆ ಪರಿಸರ ಕುರಿತು ಜಾಗೃತಿ ಮೂಡಿಸಿ ಸಹಿ ಸಂಗ್ರಹಿಸಿದರು. ನಿವೃತ್ತ ನೌಕರರ ಸಂಘ ಹಾಗೂ ಕಲ್ಯಾಣ ನಗರದ ಕಲ್ಪವೃಕ್ಷ ಸಂಸ್ಥೆ ಪದಾಧಿಕಾರಿಗಳು ಈ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಂಯೋಜಕ ಪ್ರಕಾಶ ಗೌಡರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement