ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಎಸ್‌ಪಿ ಪಟ್ಟಿ ಪ್ರಕಟ

Srinivasa Murthy VN
Updated On : 22 Mar 2014, 10:15 am

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬಹುಜನ ಸಮಾಜ ಪಾರ್ಟಿ 21ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಚಿಕ್ಕೋಡಿ ಕ್ಷೇತ್ರದಿಂದ - ಮಚ್ಚೇಂದ್ರ ಕಾಡಪೂರ, ಬೆಳಗಾಂ-ರಮೇಶ್ ಕಡ್ಲಾಸ್ಕರ್, ಬಾಗಲಕೋಟೆ-ವೈ.ಸಿ. ಕಾಂಬಳೆ, ಬಿಜಾಪುರ(ಎಸ್‌ಸಿ) -ಸುಧಾಕರ್ ಕನಮಡಿ, ಗುಲ್ಬರ್ಗ(ಎಸ್‌ಸಿ)-ಮಹಾದೇವ ಬಿ ಧನ್ನಿ, ಬೀದರ್ -ಶಂಕರ್ ಭಯ್ಯಾ, ಕೊಪ್ಪಳ-ಸೈಯದ್ ಜಿಯಾಉದ್ದೀನ್ ಆರೀಫ್, ಬಳ್ಳಾರಿ- ಬಿ. ರಾಮುಡು( ಅಬ್ಬಿಗೇರಿ ರಾಮಣ್ಣ), ಹಾವೇರಿ- ಬಿ. ಗಣೇಶ್, ಶಿವಮೊಗ್ಗ- ಮಂಜುನಾಥ್ ಗೌಡ, ಉತ್ತರ ಕನ್ನಡ-ಸಂತೋಷ್ ನಾಯಕ್, ಉಡುಪಿ- ಚಿಕ್ಕಮಗಳೂರು-ಜಾಕೀರ್ ಹುಸೇನ್, ಹಾಸನ-ಎ.ಪಿ. ಅಹಮದ್, ದಕ್ಷಿಣ ಕನ್ನಡ-ಮಹಮದ್ ಕರೀಂ , ಚಿತ್ರದುರ್ಗ(ಎಸ್‌ಸಿ)-ಟಿ.ಡಿ. ರಾಜಗಿರಿ, ಮಂಡ್ಯ-ಡಾ. ಎಂ. ಕೃಷ್ಣಮೂರ್ತಿ, ಮೈಸೂರು-ಮೋಹನ್ ಕುಮಾರ್, ಬೆಂಗಳೂರು ಉತ್ತರ-ವಿ. ವೇಲು, ಬೆಂಗಳೂರು ಕೇಂದ್ರ-ಆರ್. ಮೋಹನ್‌ರಾಜ್, ಚಿಕ್ಕಬಳ್ಳಾಪುರ-ಚಿತ್ರ ಪ್ರಸಾದ್, ಕೋಲಾರ-ಆರ್.ರವೀಂದ್ರ ಕುಮಾರ್ ಕಣಕ್ಕಿಳಿಯಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಹಿಮಾ ಅರಿವೆ ಹಾವಿದ್ದಂತೆ
ದಾವಣಗೆರೆ: ಮಹಿಮಾ ಪಟೇಲ್ ಅರಿವೆ ಹಾವು ಇದ್ದಂತೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ ಜಯ ನಿಶ್ಚಿತ ಎಂದು ತೋಟಗಾರಿಕೆ ಸಚಿವ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ಕೊಡಲಿಲ್ಲವೆಂಬ ಕಾರಣಕ್ಕೆ ಪಕ್ಷ ತೊರೆದ ಮಹಿಮಾ ಈಗ ಪಕ್ಷದಲ್ಲಿ ಲೆಕ್ಕಕ್ಕಿಲ್ಲದವರು. ಕಾಂಗ್ರೆಸ್ ತೊರೆಯಲು ಒಂದು ಕಾಲು ಹೊರಗಿಟ್ಟಿರುವ ಮಹಿಮಾ ಪಕ್ಷ ಬಿಟ್ಟರೆ ನಮಗಾಗಲೀ, ಪಕ್ಷಕ್ಕಾಗಲೀ ಯಾವುದೇ ತೊಂದರೆ ಇಲ್ಲ. ಮಹಿಮಾ ಮನಸ್ಸಿಗೆ ಬಂದಂತೆ ಮಾಡಬಹುದು ಎಂದರು.
ಹಲವು ಮುಖಂಡರ ನಾಮಪತ್ರ
ನವದೆಹಲಿ: ಕೇಂದ್ರದ ಮಾಜಿ ಸಚಿವ ಅಜಯ್ ಮಾಕನ್, ಭೂಸೇನೆಯ ನಿವೃತ್ತ ಮುಖ್ಯಸ್ಥ ವಿ.ಕೆ.ಸಿಂಗ್, ನಟ ಶತ್ರುಘ್ನ ಸಿನ್ಹಾ, ಪತ್ರಕರ್ತ ಅಶುತೋಷ್, ಆಶೀಷ್ ಖೇತಾನ್ ಸೇರಿದಂತೆ ಅನೇಕ ಮುಖಂಡರು ಶುಕ್ರವಾರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.  ಹಿಂಸಾಚಾರ, ಗೊಂದಲದ ನಡುವೆಯೇ ಸಿನ್ಹಾ ಅವರು ಬಿಹಾರದ ಪಟ್ನಾ ಸಾಹೇಬ್‌ನಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ದೆಹಲಿಯಲ್ಲಿ ಕಾಂಗ್ರೆಸ್‌ನಿಂದ ಅಜಯ್ ಮಾಕನ್, ಸಂದೀಪ್ ದೀಕ್ಷಿತ್, ಬಿಜೆಪಿಯ ಮೀನಾಕ್ಷಿ ಲೇಖಿ, ಆಪ್‌ನ ಅಶುತೋಷ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಜ.ವಿ.ಕೆ.ಸಿಂಗ್ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಇವರ ವಿರುದ್ಧ ಕಾಂಗ್ರೆಸ್‌ನ ರಾಜ್‌ಬಬ್ಬರ್, ಆಪ್‌ನ ಶಾಜಿಯಾ ಇಲ್ಮಿ ಕಣಕ್ಕಿಳಿಯಲಿದ್ದಾರೆ. ಮೇಘಾಲಯದಲ್ಲಿ ಲೋಕಸಭೆಯ ಮಾಜಿ ಸ್ಪೀಕರ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಪಿ.ಎ.ಸಂಗ್ಮಾ ಉಮೇದುವಾರಿಕೆ ಸಲ್ಲಿಸಿದ್ದಾರೆ. 6 ವರ್ಷಗಳ ನಂತರ ಸಂಗ್ಮಾ ಅವರು ಚುನಾವಣಾ ಕಣಕ್ಕಿಳಿದಿದ್ದಾರೆ.
ಬೀದರ್ ಗೊಂದಲಕ್ಕೆ ಶೀಘ್ರ ತೆರೆ
ಬಾಗಲಕೋಟೆ: ಬೀದರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಂ್ಕುಂು ಗೊಂದಲವಿದ್ದರೆ ಪಕ್ಷದ ವರಿಷ್ಠರು ಸಮಾಧಾನಕರವಾಗಿ ಇತ್ಯರ್ಥ ಪಡಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬೀದರ್ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕುರಿತು ಗೊಂದಲಗಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅಂಥ ಗೊಂದಲವಿದ್ದರೆ ಪರಸ್ಪರ ಚರ್ಚೆಯ ಮೂಲಕ ಪರಿಹರಿಸಲಾಗುವುದು. ಬಿಜೆಪಿಂುಲ್ಲಿ ಗುಂಪು ರಾಜಕಾರಣ ಇಲ್ಲ. ಈಗ ಪಕ್ಷ ಒಗ್ಗಟ್ಟಾಗಿದೆ ಎಂದರು.
ಬಿಜೆಪಿ ಕಾರ್ಯಕರ್ತರಿಂದ ಥಳಿತ
ಪಟನಾ: ಪಟ್ನಾ ಸಾಹೇಬ್‌ನ ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಗುಂಪೊಂದಕ್ಕೆ ಬಿಜೆಪಿ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶುಕ್ರವಾರ ಸಿನ್ಹಾ ಅವರು ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಾಗ ಪಟನಾದ ಕಾರ್ಗಿಲ್ ಚೌಕ್‌ನಲ್ಲಿ ಈ ಘಟನೆ ನಡೆದಿದೆ. ಲೋಕಹಿತ ವಿಕಾಸ್ ಮಂಚ್ ಎಂಬ ಸರ್ಕಾರೇತರ ಸಂಸ್ಥೆಯ ಸದಸ್ಯರೆನ್ನಲಾದ ಕೆಲವರು ಸಿನ್ಹಾರಿಗೆ ಕಪ್ಪುಬಾವುಟ ಪ್ರದರ್ಶಿಸಿದರು. ತಕ್ಷಣ ಉದ್ರಿಕ್ತರಾದ ಸಿನ್ಹಾ ಬೆಂಬಲಿಗರು, ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದರು. ಗುರುವಾರವೂ ಸಿನ್ಹಾ ಬಿಜೆಪಿ ಕಚೇರಿಗೆ ತೆರಳುತ್ತಿದ್ದಾಗ ಕೆಲವರು ಕಪ್ಪುಬಾವುಟ ಪ್ರದರ್ಶಿಸಿ ಹಲ್ಲೆಗೊಳಗಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement