ಪ್ರಯೋಗಶೀಲತೆ ಸಮಾಜದ ಒಳಿತಿಗೆ ಬಳಕೆಯಾಗಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 23
ಪ್ರಯೋಗಶೀಲ ಮನಸ್ಸಿನ ಜನರು ಪ್ರಯೊಗಶೀಲತೆಯನ್ನ್ನು ಸಮಾಜದ ಒಳತಿಗೆ ಉಪಯೋಗಿಸಬೇಕು ಇದರಿಂದ ಸಾಮಾಜಿಕ ಸ್ವಾಸ್ಥ್ಯ್ನ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.
ಭಾನುವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆಯೋಜಿಸಿದ್ದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯುವಕರು ತಮ್ಮಲ್ಲಿರುವ ಪ್ರತಿಭೆಗಳನ್ನ್ನು ಹೊರಸೂಸಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಕಲಿಕೆಯ ಜೊತೆಗೆ ಇಂತಹ ಯುವ ಪ್ರತಿಭೆಗಳನ್ನ್ನು ಗುರುತಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಜಾನಪದ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ, ಜಾನಪದ ಸಾಹಿತ್ಯ ನಮ್ಮ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದು ಮನುಷ್ಯನ ಅತ್ಯುತ್ತಮ ಬೆಳವಣಿಗೆಗೆ ರೂಪರೇಷೆಯನ್ನ್ನು ಕೊಡುವಂತಹ ಸಾಮರ್ಥ್ಯ ಜಾನಪದ ಸಾಹಿತ್ಯಕ್ಕೆ ಇದೆ ಎಂದರು.
ಅಧ್ಯಕ್ಷತ್ನೆ ವಹಿಸಿದ್ದ ಡಾ. ಟಿ.ಆರ್. ಸುಬ್ರಹ್ಮಣ್ಯ ಮಾತನಾಡಿದರು. ಮೌಲ್ಯ ಮಾಪನ ವಿಭಾಗದ ಕುಲಸಚಿವ ಡಾ. ಬಿ.ಎಸ್. ರೆಡ್ಡಿ ವಂದಿಸಿದರು. ಡಾ. ಸಿ. ಎಸ್. ಪಾಟೀಲ ಸೇರಿದಂತೆ ಇದ್ದರು.
ಲೀಗ್ ಕ್ರಿಕೆಟ್ ಪಂದ್ಯಾವಳಿ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಧಾರವಾಡ ವಲಯದ ವತಿಯಿಂದ 3ನೇ ವಿಭಾಗೀಯ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ನಾಕ್-ಔಟ್ ಆಧಾರದ ಮೇಲೆ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಎಸ್‌ಸಿಎ ಧಾರವಾಡ ವಲಯ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಸಕ್ತ ತಂಡಗಳು ಪಾಲ್ಗೊಳ್ಳಬಹುದು. ನಗರದ ಕರ್ನಾಟಕ ಜಿಮಖಾನಾ ಮೈದಾನದಲ್ಲಿ ಪಂದ್ಯ ನಡೆಯಲಿವೆ.
ಆಸಕ್ತ ತಂಡಗಳು ರಾಜನಗರ ಕೆಎಸ್‌ಸಿಎ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು, ಮಾ. 31ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಮಾಹಿತಿಗೆ ಮನೀಷ ಠಕ್ಕರ (97425 77845) ಅಥವಾ ಕೆಎಸ್‌ಸಿಎ ಕಚೇರಿ (0836 2354372) ಸಂಪರ್ಕಿಸುವಂತೆ ಧಾರವಾಡ ವಲಯದ ಸಂಯೋಜನಕಾರಿ ಬಾಬಾ ಭೂಸದ ತಿಳಿಸಿದ್ದಾರೆ.
ಬೇಸಿಗೆ ಕ್ರಿಕೆಟ್ ಶಿಬಿರ: ನಗರದ ಟ್ಯಾಲೆಂಟ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 2ನೇ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಜೆ.ಕೆ. ಸ್ಕೂಲ್ ಬಳಿಯ ಶಕ್ತಿ ಕಾಲೋನಿಯಲ್ಲಿ ಏ. 2 ರಿಂದ ಮೇ 11ರವರೆಗೆ ಆಯೋಜಿಸಲಾಗಿದೆ.
8 ರಿಂದ 19 ವರ್ಷದೊಳಗಿನ ಬಾಲಕರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಅನುಭವಿ ತರಬೇತುದಾರರಾದ ಮುರುಗೇಶ ಮೂಗಬಸ್ತ (98458 61588), ರಾಘವೇಂದ್ರ ಅನಗೋಳಕರ (98441 58492) ಮತ್ತು ಮಂಜುನಾಥ ಮೂಗಬಸ್ತ (98869 57555) ಮಾರ್ಗದರ್ಶನ ನೀಡುವರು ಎಂದು ಕ್ಲಬ್ ಅಧ್ಯಕ್ಷ ಜಗದೀಶ ಕಲ್ಲಯನಶೆಟ್ಟಿ ತಿಳಿಸಿದ್ದಾರೆ.