ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಡಿಕ್ರೂಜ್ ಮೇಲೆ ಹಲ್ಲೆ: ದೂರು

Srinivasa Murthy VN
Updated On : 25 Mar 2014, 10:50 am

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಮಾ. 24
ಆರ್‌ಪಿಎಫ್‌ನ ಸುಮಾರು 40 ಸಿಬ್ಬಂದಿ ನೈಋತ್ಯ ರೇಲ್ವೆ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಜ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.
ಘಟನೆಯಲ್ಲಿ ತೀವ್ರ ಅಸ್ವಸ್ಥರಾದ ಡಿಕ್ರೂಜ್ ಅವರಿಗೆ ಇಲ್ಲಿಯ ರೇಲ್ವೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಡಿಕ್ರೂಜ್ ಹಾಗೂ ರೇಲ್ವೆ ರಕ್ಷಣಾ ಸಿಬ್ಬಂದಿ ಮಧ್ಯೆ ಕಳೆದ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನ್ನಲಾಗಿದೆ. ಸೋಮವಾರ ಮಧ್ಯಾಹ್ನ ರೇಲ್ವೆಯ ಮಹಾಪ್ರಬಂಧಕ ಪ್ರದೀಪ ಕುಮಾರ ಸಕ್ಸೇನಾ ಅವರನ್ನು ಡಿಕ್ರೂಜ್ ಭೇಟಿ ಮಾಡಲು ತೆರಳುತ್ತಿದ್ದಾಗ ರೇಲ್ವೆ ಪೊಲೀಸರು ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಘಟನೆಯ ಪ್ರತ್ಯಕ್ಷದರ್ಶಿ ನೈಋತ್ಯ ರೇಲ್ವೆ ಸಹಾಯಕ ಪ್ರಧಾನ ಕಾರ್ಯದರ್ಶಿ ಅಲ್ಬರ್ಟ್ ಡಿಕ್ರೂಜ್ ತಿಳಿಸಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲ್ನೆ ನಿರಾಕರಿಸಿದ ಆರ್‌ಪಿಎಫ್ ಸಿಬ್ಬಂದಿ:  ಸೋಮವಾರ ನಡೆದ ಘಟನೆಯನ್ನು ನಿರಾಕರಿಸಿರುವ ್ನಆರ್‌ಪಿಎಫ್ ಸಿಬ್ಬಂದಿ, ಡಿಆರ್‌ಎಂ ಕಚೇರಿ ಬಳಿ ಸಂಜೆ ಸಭೆ ನಡೆಸಿದರು. ಎ.ಎಂ. ಡಿಕ್ರೂಜ್ ಮೇಲೆ ಆರ್‌ಪಿಎಫ್ ಸಿಬ್ಬಂದಿ ಯಾರೂ ಹಲ್ಲೆ ಮಾಡಿಲ್ಲ. ಡಿಕ್ರೂಜ್ ಹಾಗೂ ಸಹಚರರು ಕಳೆದ ಮಾ. 20ರಂದು ಸಿಪಿಓ (ಛೀಫ್ ಪರ್ಸ್‌ನಲ್ ಆಫೀಸರ್) ಅವರನ್ನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಲು ಬಂದಿದ್ದರು. ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್‌ಪಿಎಫ್ ವಿಶೇಷ ಬೇಹುಗಾರಿಕೆ ಪೇದೆ ಸಿ.ಐ. ಕೊಪ್ಪದ ಕ್ಯಾಮೆರಾದಿಂದ ಕಛೇರಿಯಲ್ಲಿ ನಡೆಯುತ್ತಿರುವ ಚರ್ಚೆಯ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಡಿಕ್ರೂಜ್ ಆಕ್ಷೇಪ ವ್ಯಕ್ತಪಡಿಸಿ ಥಳಿಸಿದ್ದಾರೆ. ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮಾ. 21ರಂದು ಮೈಸೂರಿಗೆ ತೆರಳಿದ ಡಿಕ್ರೂಜ್ ಇದೇ ರೀತಿಯ ಅವಾಂತರ್ನ ಸೃಷ್ಟಿಸಿದ್ದರು. ಈ ಕುರಿತು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಶಕ್ಕೆ ತೆಗೆದುಕೊಳ್ಳುವರು ಎಂಬ ಭಯದಿಂದ ತಲೆಮರೆಸಿಕೊಂಡಿದ್ದ ಅವರು ಹಲ್ಲೆಯ ನಾಟಕವಾಡಿ ಆಸ್ಪತ್ರೆ ಸೇರಿದ್ದಾರೆಂದು ನೈಋತ್ಯ ರೇಲ್ವೆ ಆರ್‌ಪಿಎಫ್ ಸಂಘದ ಅಧ್ಯಕ್ಷ ಬಿ. ವಿ. ರಮಣ ಹಾಗೂ ಕಾರ್ಯದರ್ಶಿ ಬಿ. ವೈ. ದೊಡ್ಡಮನಿ ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement