ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಏ. 4ಕ್ಕೆ ವಿರೂಪಾಕ್ಷೇಶ್ವರ ರಥೋತ್ಸವ

Srinivasa Murthy VN
Updated On : 26 Mar 2014, 12:03 pm

ತಾಲೂಕಿನ ಉಪ್ಪಿನಬೆಟಗೇರಿ ಮೂರು ಸಾವಿರ ವಿರಕ್ತಮಠದ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಲವಣಗಿರಿ ಉತ್ಸವವು ಮಂಗಳವಾರದಿಂದ ಆರಂಭಗೊಂಡಿದ್ದು ಏ. 4ರಂದು ರಥೋತ್ಸವ ಮೂಲಕ ಸಮಾರೋಪಗೊಳ್ಳಲಿದೆ.
ಶ್ರೀ ಗುರು ವಿರೂಪಾಕ್ಷೇಶ್ವರ ಗದ್ದುಗೆ ಆವರಣದಲ್ಲಿ ಕುಂದರಗಿ ಅಡವಿಸಿದ್ಧೇಶ್ವರದ ಅಮರೇಶ್ವರ ದೇವರಿಂದ ಜೀವನ ದರ್ಶನ ಪ್ರವಚನ ಆರಂಭಗೊಂಡಿದ್ದು, ಅವರಿಂದ ಏ. 2ರ ವರೆಗೆ ಪ್ರವಚನ ನಡೆಯಲಿದ್ದು, 3ರ ಸಂಜೆ 6ಕ್ಕೆ ಕಮತಗಿಯ ಶ್ರೀ ಹುಚ್ಚೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರವಚನ ಮಹಾಮಂಗಲಗೊಳ್ಳಲಿದೆ.
ಶ್ರೀ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿದಿನ ಸಂಜೆ 7ಕ್ಕೆ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ಮೂರು ಗ್ರಾಮಗಳ ತಲಾ ಐದು ಹಿರಿಯರ ಸತ್ಕಾರ ನಡೆಯಲಿದೆ. ಏ. 1ರಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ರೈತರ ಹಿತಚಿಂತನೆ ಸಮಾರಂಭ ಜರುಗಲಿದ್ದು, ಕವಿವಿ ಸಂಶೋಧನೆ ನಿರ್ದೇಶಕ ಡಾ. ಬಸವರಾಜ ಖಾದಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಸಿದ್ಧನಗೌಡ ಪಾಟೀಲ, ಸಾವಯವ ಕೃಷಿ ತಜ್ಞ ಜಿ.ಟಿ. ಶಿರೋಳ, ಎಪಿಎಂಸಿ ಸದಸ್ಯ ಚನ್ನಬಸಪ್ಪ ಮಸೂತಿ ಭಾಗವಹಿಸುತ್ತಾರೆ.
ಏ. 4ರಂದು ಸಾಮೂಹಿಕ ವಿವಾಹಗಳು ನೆರವೇರಲಿದ್ದು, ಅಂದೇ ಹಾಲ್ವಿ ಚರಣಗಿರಿ ಶಿವಯೋಗೀಶ್ವರ ಸಂಸ್ಥಾನಮಠದ ಮಹಾಂತ ಸ್ವಾಮೀಜಿ ಅವರ ಜಂಗಮೋತ್ಸವ ಜರುಗಲಿದೆ. ಸಂಜೆ ಶ್ರೀ ಗುರು ವಿರೂಪಾಕ್ಷೇಶ್ವರ ರಥೋತ್ಸವ ಜರುಗುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಆಕ್ಸ್‌ಫರ್ಡ್ ಕಾಲೇಜಿಗೆ ದ್ವಿತೀಯ ಸ್ಥಾನ
ಹುಬ್ಬಳ್ಳಿ: ದಾವಣಗೆರೆಯ ಜಿಎಂಐಟಿ ಎಂಬಿಎ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ 'ಅಸ್ತಿತ್ವ-2014'ರಲ್ಲಿ ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜು ಜನರಲ್ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕಾಲೇಜಿನ ವಿದ್ಯಾರ್ಥಿಗಳಾದ ವಿನಯಾ ಮತ್ತು ನವ್ಯಾ ಫೈನಾನ್ಶಿಯಲ್ ವಿಭಾಗದಲ್ಲಿ  ಮತ್ತು ಸಾಹಿಲ್ ಹಾಗೂ ಸಿದ್ದಲಿಂಗೇಶ ಮಾರ್ಕೆಟಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮ್ಯಾನೆಜ್‌ಮೆಂಟ್ ಫೆಸ್ಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷರಾದ ವಸಂತ ಹೊರಟ್ಟಿ, ಪ್ರಾಚಾರ್ಯ ಡಾ. ಜೀತೇಂದ್ರ ಶಿಗಿಹಳ್ಳಿ, ಬಿಬಿಎ ಸಂಯೋಜಕಿ ನಾಝಿಯಾ ಜಹಗೀರದಾರ ಅಭಿನಂದಿಸಿದ್ದಾರೆ.

ಹಳೆ ವಿದ್ಯಾರ್ಥಿಗಳ ಸಂಘಟನೆ
ಧಾರವಾಡ: ಇಲ್ಲಿನ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ (ಎಲ್.ಇ.ಎ.) ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಸಂಘಟನೆ ಮಾಡುತ್ತಿದ್ದು, ಪ್ರತಿ ಭಾನುವಾರ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ನಡೆಸಲಾಗುತ್ತಿದೆ. ಶಾಲೆ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆ ಇದೆ. ಹಳೆ ವಿದ್ಯಾರ್ಥಿಗಳು ಶಾಲೆ ಮುಖ್ಯೋಪಾಧ್ಯಾಯ ಜಿ.ಬಿ. ಶ್ಯಾನವಾಡ (90360 37275), ನಾಗೇಶ ಕುಸುಗಲ್ (99643 91003), ಪಿ.ಎಸ್. ಕುಂದಗೋಳ (76769 09096) ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement