ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಚೇರಿಗೆ ಬಾರದ ಪಿಡಿಒ

Srinivasa Murthy VN
Updated On : 26 Mar 2014, 12:04 pm

ಕಲಘಟಗಿ: ತಾಲೂಕಿನ ಗಂಬ್ಯಾಪುರ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ಕಳೆದ ಆರು ತಿಂಗಳಿಂದ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಜನರ ಕೆಲಸಗಳನ್ನು ಕೇಳುವವರು ಇಲ್ಲದಂತಾಗಿದೆ ಎಂದು ಜನರು ದೂರಿದ್ದಾರೆ. ಈ ಕುರಿತು ತಾಪಂ ಅಧಿಕಾರಿಗಳಿಗೆ ದೂರು ನೀಡಿರುವ ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಉಳವಪ್ಪ ಬಿದರಳ್ಳಿ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ. ನಾಗರಾಜ ಅವರು ಗ್ರಾಮಸ್ಥರು ದೂರವಾಣಿ ಕರೆಗೂ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.  
     
ಉಚಿತ ಸಿಇಟಿ ತರಬೇತಿ
ಧಾರವಾಡ: ಎಬಿವಿಪಿ ನಗರ ಘಟಕದ ವತಿಯಿಂದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಉಚಿತ ಸಿಇಟಿ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಏಪ್ರಿಲ್ 1ರಿಂದ 15 ರವರೆಗೆ ನಡೆಯಲಿದೆ. ಪ್ರವೇಶ ಪಡೆಯಲು ಮಾ. 30 ಕೊನೆಯ ದಿನವಾಗಿದ್ದು, ಆಸಕ್ತರು ಮಾಹಿತಿಗಾಗಿ ಮಲ್ನಾಡ ಕೋಚಿಂಗ್ ಸೆಂಟರ್, ರಾಮಕೃಷ್ಣ ಆಶ್ರಮದ ಎದುರು, ಹಳಿಯಾಳ ರಸ್ತೆ, ಜಯನಗರ ಅಥವಾ  ಮೊ. 9060656555, ಮೊ 7795151969ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಬೇಸಿಗೆ ತರಬೇತಿ ಶಿಬಿರ
ಧಾರವಾಡ: ಮಲ್ಲಸಜ್ಜನ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ 14 ವರ್ಷದೊಳಗಿನ ಮಕ್ಕಳಿಗೆ ಬೇಸಿಗೆ ತರಬೇತಿ ಶಿಬಿರವನ್ನು ಏ. 11ರಿಂದ 30ರ ವರೆಗೆ ಹಮ್ಮಿಕೊಳ್ಳಲಾಗಿದೆ. ರಂಗ ತರಬೇತಿ, ಆಭಿನಯ, ನಾಟಕ, ರಂಗ ಗೀತೆ, ಯೋಗಾಸಾನ, ಯೆರೋಬಿಕ್ಸ, ಕೋಲಾಟ, ಚಿತ್ರಕಲೆ, ಮೆಹಂದಿ, ಕಥೆ ಹೇಳುವ ತರಬೇತಿ ನೀಡಲಾಗುವುದು. ಆಸಕ್ತರು ಹೆಸರನ್ನು ಏ. 3ರೊಳಗೆ ನೊಂದಾಯಿಸಬೇಕು. ಮಾಹಿತಿಗೆ ಶಿಬಿರದ ಸಂಯೋಜಕ ಸಿಕಂದರ ದಂಡಿನ (97432 50624) ಸಂಪರ್ಕಿಸುವಂತೆ ಕೋರಲಾಗಿದೆ.

ಯುವತಿ ನಾಪತ್ತೆ
ಹುಬ್ಬಳ್ಳಿ: ಶಿರಡಿ ನಗರದ 20 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರಡಿ ನಗರದ ಸುಮಾ ವಡ್ಡರ (20) ವರ್ಷದ ಯುವತಿ  ಕೆಲವು ದಿನಗಳ ಹಿಂದೆ ಕುಟುಂಬದ ಇತರ ಸದಸ್ಯರಿಗೆ ಏನೂ ಹೇಳದೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಯುವತಿಯ ತಾಯಿ ರೇಣುಕಾ ವಡ್ಡರ ಪೊಲೀಸರಿಗೆ ದೂರು ನೀಡಿದ್ದಾರೆ.

ಚಿತ್ತಾಲ ನಿಧನ: ಸಂತಾಪ
ಕಲಘಟಗಿ: ಇತ್ತೀಚೆಗೆ ನಿಧನರಾದ ಸಾಹಿತಿ ಡಾ. ಯಶವಂತ ಚಿತ್ತಾಲ ಅವರಿಗೆ ತಾಲೂಕು ಕಸಾಪ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಂ.ಎಂ. ಪುರದನಗೌಡ್ರ ಅಧ್ಯಕ್ಷತೆಯಲ್ಲಿ ಜರುಗಿದ ಸಂತಾಪ ಸಭೆಯಲ್ಲಿ ಸಾಹಿತಿ ಕೆ.ಬಿ. ಪಾಟಿಲ ಕುಲಕರ್ಣಿ, ಎಂ.ಆರ್. ತೋಟಗಂಟಿ, ಎಂ.ಆರ್. ದೇಶಪಾಂಡೆ, ವೈ, ಜಿ. ಭಗವತಿ, ಕೆ.ಜಿ. ರಪಾಟೆ, ಎಂ.ಬಿ. ಮಮ್ಮಿಗಟ್ಟಿ, ಪ್ರಭು ರಂಗಾಪುರ, ಕೆ.ಬಿ. ಗುಡಿಹಾಳ, ಅನಿಲ ಪಮ್ಮಾರ, ಪಿ.ಎ. ರಾಯ್ಕರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement