ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿಜ್ಞಾನ, ತಂತ್ರಜ್ಞಾನದಲ್ಲಿ ಮಹತ್ಸಾಧನೆ

Srinivasa Murthy VN
Updated On : 26 Mar 2014, 12:03 pm

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 25
ಸದ್ಯದ ಬದಲಾವಣೆ ಗಾಳಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ನಡುವಿನ ಗಡಿಗಳನ್ನು ಮೀರಿ ಬೀಸಿದೆ. ಈ ಕ್ಷೇತ್ರಗಳಲ್ಲಿ ಮಹತ್ಸಾಧನೆಯೇ ಆಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಭೂಷಣ ಪ್ರೊ೤ ಪಿ. ಬಲರಾಮ್ ಹೇಳಿದರು.
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ 64ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ವೃತ್ತಿಪರ ಸಂಶೋಧಕರನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳ ಶೈಕ್ಷಣಿಕ ಸಾಧ್ಯತೆ ಊಹಿಸಲೂ ಅಸಾಧ್ಯ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲೂ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ನಡುವಿನ ಅಂತರ ಸ್ಪಷ್ಟವಿಲ್ಲ. ಜ್ಞಾನ ಶಾಖೆಗಳಿಗೆ ತಡೆಗೋಡೆ ಕಟ್ಟಿಕೊಂಡಿರುವ ವಿವಿಗಳು ಶಿಕ್ಷಣದ ಭದ್ರ ಬುನಾದಿಗೆ ಧಕ್ಕೆ ತಂದಿವೆ. ಈ ಹಿನ್ನೆಲೆಯಲ್ಲಿ ನಾವು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ನವೀನ ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವತ್ತ ಗಮನ ಹರಿಸಬೇಕಿದೆ ಎಂದರು.
ಬಹುತೇಕ ಶಿಕ್ಷಣ ಸಂಸ್ಥೆಗಳು ಜ್ಞಾನ ಹಂಚಿಕೆಯತ್ತ ಹೆಚ್ಚು ಒಲವು ತೋರುತ್ತಿವೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಯಲ್ಲಿ ಸಮಸ್ಯೆಯಾಗುತ್ತಿದೆ. ಕೆಲವು ಶೈಕ್ಷಣಿಕ ಶಿಸ್ತುಗಳನ್ನು ವೃತ್ತಿಪರ ಎಂದು ಕರೆದರೆ ಬಿಎಸ್ಸಿ, ಬಿಎ ಮುಂತಾದವುಗಳನ್ನು ವೃತ್ತಿಪರವಲ್ಲವೆಂದು ಗುರುತಿಸಲಾಗುತ್ತದೆ. ಹೀಗಾಗಿ, ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಮಾನವಿಕಗಳ ನಡುವಿನ ಕಂದಕವನ್ನು ಬೆಸೆಯಬೇಕಿದೆ ಎಂದರು.
ವಿಜ್ಞಾನ ಮತ್ತು ತಂತ್ರತ್ರಾನ ಒಂದೇ ನಾಣ್ಯದ ಎರಡು ಮುಖಗಳು. ಪಾಶ್ಚಿಮಾತ್ಯ ವಿವಿಗಳಲ್ಲಿ ಈ ಗ್ರಹಿಕ ಅಂತರ ಕಡಿಮೆ ಇದೆ. ಬಹುತೇಕ ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಎಂಜಿನಿಯರಿಂಗ್ ಪದವಿಧರರೇ ಇರುವುದರಿಂದ 'ಕಂಪ್ಯೂಟರ್ ವಿಭಾಗ' ಎಂಬ ಭೇದವೇಕೆ ಎಂದು ಪ್ರೊ. ಬಲರಾಮ ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement