ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಯೋಗ, ಭೋಗ ಭಾರತೀಯ ಸಂಸ್ಕೃತಿ

Srinivasa Murthy VN
Updated On : 28 Mar 2014, 11:06 am

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ.27
ಸತ್ಯ, ಪ್ರಾಮಾಣಿಕಗಳ ಕರ್ಮಮಾಡಿ ಭೋಗ ಅನುಭವಿಸಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿಯ ಎಸ್‌ಡಿಎಂ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಇನ್‌ಸಿಗ್ನಿಯಾ ಸಾಂಸ್ಕೃತಿಕ ಹಾಗೂ ತಾಂತ್ರಿಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ- ಭೋಗ ಎಂಬುದು ನಮ್ಮ ಭಾರತೀಯ ಸಂಸ್ಕೃತಿ. ಇಲ್ಲಿ ಪ್ರಾಮಾಣಿಕವಾಗಿ ದುಡಿದು ಎಲ್ಲ ಸಂಬಂಧಗಳನ್ನು ಗೌರವಿಸಿ, ಪ್ರೀತಿಸಿ ಸಂಘಜೀವಿಯಾಗಿ ಬದುಕುವ ಸುಂದರ ವಾತಾವರಣವಿದೆ. ಆದರೆ ಇಂದು ಆಧುನಿಕ ಸೆಳೆತಕ್ಕೆ ಬಲಿಯಾಗುತ್ತಿರುವ ದೇಶದ ಯುವಕರು ಸಂಬಂಧಗಳನ್ನು ಗೌರವಿಸುವ ಸಂಸ್ಕೃತಿಯಿಂದ ವಿಮುಖಗೊಳ್ಳುತ್ತಿರುವುದು ದುರಂತವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಮನೋಭಾವನೆ ಪ್ರತಿ ಕ್ಷೇತ್ರಗಳಲ್ಲಿ ತನ್ನ ಪ್ರವೇಶ ಮಾಡಿರುವುದರಿಂದ ಅಲ್ಲಿ ಒತ್ತಡವೆ ಮನಸ್ಸನ್ನು ಆಳುತ್ತಿದೆ. ಇದರಿಂದಾಗಿ ವೈಯಕ್ತಿಕವಾಗಿ ಚಿಂತಿಸಲು ಸಹ ಸಮಯ, ಆಸಕ್ತಿ ಇಲ್ಲದಂತಾಗುತ್ತಿದೆ. ಬದುಕು ಎಷ್ಟೇ ಒತ್ತಡದಲ್ಲಿದ್ದರೂ ನಗುವುದನ್ನು ಹಾಗೂ ಸಂಬಂಧಗಳಲ್ಲಿ ಪ್ರೀತಿ ಕಾಣುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೃಷಿ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಡಿ.ಪಿ. ಬಿರಾದಾರ ಮಾತನಾಡಿ, ಎಲ್ಲ ರಂಗಗಳಲ್ಲಿ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ಸುಂದರ ಬದುಕು ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದೇಶದ ನೂರಕ್ಕೂ ಹೆಚ್ಚು ಕಾಲೇಜುಗಳ ಸುಮಾರು 4 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಲ್ವಾರ್ ಏರ್‌ಫೋರ್ಸ್‌ನಿಂದ ಮೈ ಪುಳಕಿತಗೊಳಿಸಿದ ಏರ್ ಶೋ ನಡೆಯಿತು.  ಈ ಸಂದರ್ಭದಲ್ಲಿ ಡಾ. ಕೆ. ಗೋಪಿನಾಥ, ಡಾ. ಎಸ್. ಮೋಹನಕುಮಾರ, ವಿವೇಕ ಮುಂಗಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement