ಗೃಹ ಸಚಿವ ಶಿಂದೆ ಅಪ್ರಬುದ್ಧ
ನವದೆಹಲಿ: ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ವಾಪಸ್ ತರುವ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಕಾರ್ಯವೈಖರಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಭೂಗತ ದೊರೆ ದಾವೂದ್ ನನ್ನು ಭಾರತಕ್ಕೆ ಕರೆತರಲು ಸಾಧ್ಯವೇ ಎಂದು ಮೋದಿ ಪ್ರಶ್ನಿಸಿದ್ದಾರೆ.
ತೃತೀಯಕ್ಕಾಗಿ ಕೈ ಭಿನ್ನರಾಗ
ನವದೆಹಲಿ: ಚುನಾವಣೆಯ ಬಳಿಕ ತೃತೀಯ ರಂಗದ ಜತೆ ಕಾಂಗ್ರೆಸ್ ಸಖ್ಯದ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಸಲ್ಮಾನ್ ಖುರ್ಷಿದ್ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ತೃತೀಯ ರಂಗದ ಜೊತೆ ಕೈಜೋಡಿಸಲಿದ್ದೇವೆ ಎಂದರೆ, ಚಿದಂಬರಂ ಅವರು ಇಂಥ ಯಾವುದೇ ಯೋಚನೆ ನಮ್ಮಲ್ಲಿ ಇಲ್ಲ. ನಾವೇ ಸರ್ಕಾರ ರಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.