ಮೋದಿ ಹೇಳಿಕೆ ತಿರುಚಲಾಗಿದೆ
ನವದೆಹಲಿ: ಪ್ರಿಯಾಂಕಾ ವಾದ್ರಾ 'ತನ್ನ ಮಗಳಂತೆ' ಎಂದು ನರೇಂದ್ರ ಮೋದಿ ಹೇಳಿಲ್ಲ ಎಂದು ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ. ಸಂದರ್ಶನದ ಬಗ್ಗೆ ತನಿಖೆ ನಡೆಸಬೇಕು. ಒತ್ತಡಕ್ಕೆ ಮಣಿದು ಸಂದರ್ಶನವನ್ನು ಎಡಿಟ್ ಮಾಡಲಾಯಿತೇ ಎಂಬುದನ್ನು ಕಂಡುಕೊಳ್ಳಬೇಕು. ಹತ್ತು ವರ್ಷಗಳಿಂದ ಗುಜರಾತ್ನ ದೂರದರ್ಶನ ಮೋದಿಯರನ್ನು ಬಹಿಷ್ಕರಿಸಿತ್ತು. ಇದೀಗ ಉದ್ದೇಶಪೂರ್ವಕವಾಗಿ ಸಂದರ್ಶನವನ್ನು ತಿರುಚಿದ್ದು ನೋವು ತಂದಿದೆ ಎಂದಿದ್ದಾರೆ.
- ಪಟೇಲ್ ನನ್ನ ಸ್ನೇಹಿತ
ಪ್ರಿಯಾಂಕಾ ವಾದ್ರಾ 'ನನ್ನ ಮಗಳಂತೆ' ಎಂಬ ಹೇಳಿಕೆ ಬಗ್ಗೆ ವಾದ-ಪ್ರತಿ ವಾದಗಳು ನಡೆದಿರುವಂತೆ ಇದೇ ಸಂದರ್ಶನದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ತಮ್ಮ ಆತ್ಮೀಯ ಸ್ನೇಹಿತ. ಕಾಂಗ್ರೆಸ್ನಲ್ಲಿ ಸ್ನೇಹಿತರು ಇದ್ದಾರೆ ಎಂದರೆ ಅದು ಅಹ್ಮದ್ ಪಟೇಲ್ ಮಾತ್ರ ಎಂದಿದ್ದರು ಮೋದಿ. ಇದೂ ವಿವಾದಕ್ಕೆ ಕಾರಣವಾಗಿದೆ.
ಊಟಕ್ಕೂ ಬಂದಿದ್ದರು
'ಅಹ್ಮದ್ ಪಟೇಲ್ ನಿವಾಸಕ್ಕೆ ನಾನು ಊಟಕ್ಕೆ ಹೋಗುತ್ತಿದ್ದೆ. ಅಲ್ಲಿ ಅವರ ಜತೆ ಉಪಾಹಾರ ಸೇವಿಸುತ್ತಿದ್ದೆ. ಅವರ ಜತೆಗೆ ಉತ್ತಮ ಮಿತ್ರತ್ವವಿತ್ತು. ಏನೇ ಆಗಲಿ ವೈಯಕ್ತಿಕ ಸೇಹ ಮುಂದುವರಿಯಬೇಕು ಎನ್ನುವುದು ನನ್ನ ಆಸೆ' ಎಂದು ಮೋದಿ ದೂರದರ್ಶನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ, ನರೇಂದ್ರ ಮೋದಿ ತಮ್ಮ ಜತೆ ಉತ್ತಮ ಸೇಹ ಹೊಂದಿದ್ದರು ಎಂಬ ಹೇಳಿಕೆ ಬಗ್ಗೆ ಅಹ್ಮದ್ ಪಟೇಲ್ ಕೆಂಡಾಮಂಡಲವಾಗಿದ್ದಾರೆ. ಮೋದಿ ಹೇಳಿಕೆ 'ಶುದ್ಧ ಸುಳ್ಳು'. ಅವರ ಹೇಳಿಕೆ 'ಹಾಸ್ಯಾಸ್ಪದ' ಎಂದು ಬಣ್ಣಿಸಿದ್ದಾರೆ.