ಎನ್ಡಿಎ ಬಂದ್ರೆ ಯುಪಿಎ ನಿರ್ಧಾರ ಪರಿಶೀಲನೆ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧದ ಬೇಹುಗಾರಿಕೆ ಪ್ರಕರಣದ ತನಿಖೆಗೆ...
ನವದೆಹಲಿ/ವಾರಾಣಸಿ/ಹೈದರಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧದ ಬೇಹುಗಾರಿಕೆ ಪ್ರಕರಣದ ತನಿಖೆಗೆ ಆಯೋಗ ರಚಿಸಲು ಮುಂದಾಗಿರುವ ಯುಪಿಎ ಸರ್ಕಾರದ ಔಚಿತ್ಯವನ್ನು ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ. ಹೈದರಾಬಾದ್ನಲ್ಲಿ ಶನಿವಾರ ಮಾತನಾಡಿದ ಅವರು ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಯುಪಿಎ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳನ್ನು ಹೊಸ ಸರ್ಕಾರ ಪರಿಶೀಲಿಸಲಿದೆ. ಅದಕ್ಕಾಗಿ ಹೊಸ ಸಮಿತಿಯೊಂದನ್ನು ಮುಂದಿನ ಸರ್ಕಾರ ರಚಿಸಲಿದೆ ಎಂದು ಅವರು ತಿಳಿಸಿದ್ದಾರೆ.
ತಿರುಗುಬಾಣವಾಗಲಿದೆ: ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗ ರಚಿಸುವ ಕಾಂಗ್ರೆಸ್ನ ನಿರ್ಧಾರ ಅದಕ್ಕೆ ತಿರುಗು ಬಾಣವಾಗಲಿದೆ. ದೇಶ ಎದುರಿಸುವ ಸಮಸ್ಯೆ ಎದುರಿಸಲು ಅಸಮರ್ಥವಾಗಿದೆ ಎಂದು ವೆಂಕಯ್ಯ ನಾಯ್ಡು ಆರೋಪಿಸಿದರು.
ಇದು ಜಗಳದ ಅಜೆಂಡಾ: ಬೇಹುಗಾರಿಕೆ ಪ್ರಕರಣದ ವಿಚಾರದಲ್ಲಿ ಕಾಂಗ್ರೆಸ್ 'ಜಗಳದ ಅಜೆಂಡಾ' ರಚಿಸಿಕೊಂಡಿದೆ ಎಂದು ಬಿಜೆಪಿಯ ಮತ್ತೊಬ್ಬ ನಾಯಕ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಹೊರ ನಡೆಯುವ ಹಂತದಲ್ಲಿದ್ದರೂ ಜಗಳದ ಅಜೆಂಡಾ ಸೃಷ್ಟಿಸಿಕೊಂಡಿದೆ. ಅವರು ಕೈಗೊಳ್ಳುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಅಧಿಕಾರಕ್ಕೆ ಬಂದನಂತರ ಆಯೋಗಕ್ಕೆ ಮುಖ್ಯಸ್ಥರನ್ನು ನೇಮಿಸಿದರೆ ಅದನ್ನು ನಾವು ÈÚßÁÚß®ÚÂÌÞÆÑÚÆ¥æ§ÞÈæ’ ಎಂದು ತಿಳಿಸಿದರು.
ಕಾನೂನು ಜ್ಞಾಪಿಸಿಕೊಳ್ಳಲಿ: ಅರುಣ್ ಜೇಟ್ಲಿ ಹೇಳಿಕೆಗೆ ಕಾನೂನು ಸಚಿವ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ. ಆಯೋಗ ರಚನೆ ನಿರ್ಧಾರ ಅಕ್ರಮ ಎಂದಿರುವ ಜೇಟ್ಲಿ ಕಾನೂನನ್ನು ಮತ್ತೊಮ್ಮೆ ಜ್ಞಾಪಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಕೇಂದ್ರದ ನಿರ್ಧಾರವನ್ನು ಪ್ರಶ್ನಿಸುವ ಜೇಟ್ಲಿ, ಗುಜರಾತ್ ಸರ್ಕಾರವೇ ಇದೇ ವಿವಾವಾದದ ಬಗ್ಗೆ ತನಿಖೆ ನಡೆಸಿ 3 ತಿಂಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಆ ಆಯೋಗ ಯಾವುದೇ ರೀತಿಯ ಸಭೆ ನಡೆಸಿಲ್ಲ ಎಂದರು ಸಿಬಲ್.
ಕಳೆದ ಲೋಕಸಭಾ ಚುನಾವಣೆಗೆ
ಹೋಲಿಸಿದರೆ ಈ ಬಾರಿ ದಾಖಲೆಯ ಮತದಾನ
ವಾಗಿದೆ. ಇದಕ್ಕೆ ಮಹಿಳೆಯರು ಮತ್ತು ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಲು ಮುಂದೆ
ಬಂದಿರುವುದೇ ಕಾರಣ.
ಮೋದಿ- ಪ್ರಿಯಾಂಕಾ
ಹದಿನೈದು ದಿನಗಳಿಂದ ಮಾಧ್ಯಮದಲ್ಲಿ ರಾರಾಜಿಸುತ್ತಿರುವ ಬಿಜೆಪಿ ಪ್ರಧಾನಿ
ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ
ಗಾಂಧಿ ಕೂಡ ಹೆಚ್ಚಿನಮತದಾನಕ್ಕೆ
ಒಂದು ಕಾರಣವಾಗಿದ್ದರೆ ಅಚ್ಚರಿ ಇಲ್ಲ
ಎನ್ನುತ್ತಾರೆ ವಿಶ್ಲೇಷಕರು. ಇದರ ಜತೆಗೆ,
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡ ಹೆಚ್ಚಿನ ಮತದಾನಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.
10 ಕೋಟಿ
ಈ ಬಾರಿ 10 ಕೋಟಿ ಹೊಸ
ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಬಹುತೇಕರು 18ರಿಂದ 23 ವರ್ಷದೊಳಗಿನವರು.
9ರ್
2009ರ
ಚುನಾವಣೆಗೆ ಹೋಲಿಸಿದಾಗ 438
ಸ್ಥಾನಗಳಿಗೆ (ಏಳನೇ ಹಂತದವರೆಗೆ)
ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.9 ಹೆಚ್ಚಾಗಿದೆ.
ಫ್ಯಾಷನ್ ಆಗಿದೆ
ಈ ಬಾರಿ ಮತದಾನ ಎನ್ನುವುದು ಫ್ಯಾಷನ್ ಕೂಡ ಆಗಿದೆ. ಬಹುತೇಕ ಯುವಜನರು ಮತದಾನದ ಬಳಿಕ ತಮ್ಮ ಸೆಲ್ಫೀಗಳನ್ನು ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
2009
ರಿಂದೀಚೆಗೆ ಕನಿಷ್ಠ 22 ರಾಜ್ಯ
ಗಳಲ್ಲಿ ಮಹಿಳಾ ಮತದಾರರ
ಪ್ರಮಾಣ ಹೆಚ್ಚಾಗಿದೆ.
ದೆಹಲಿ
65.09
(+13.24)%
ಪಂಜಾಬ್
72(+23)%
ಚಂಡೀಗಡ
71.86(+6.49)%
ಹರ್ಯಾಣ
62.09(+4.37)%
ರಾಜಸ್ಥಾನ
62.09(+13.69)%
ಮಧ್ಯಪ್ರದೇಶ
61.57(+10.41)%
ಗುಜರಾತ್
62.3(+14.5)%
ಮಹಾರಾಷ್ಟ್ರ
60(+ 9.29)%
ಗೋವಾ
76.83(+ 21.55)%
ಕರ್ನಾಟಕ
68(+9.19)%
ಕೇರಳ
74(+2.64)%
ತಮಿಳುನಾಡು
73.58(+0.55)%
ಒಡಿಶಾ
74.3(+9.04)%
ಛತ್ತೀಸ್ಗಡ
69(+13.72)%
ತ್ರಿಪುರಾ
84.9(+0.45)%
ಜಾರ್ಖಂಡ್
63.9(+12.92)%
ಮೇಘಾಲಯ
69.03(+4.65)%
ಮಣಿಪುರ
72(-5.14)%
ಮಿಜೋರಾಂ
88.57(+9.9)%
ನಾಗಾಲ್ಯಾಂಡ್
88.57(-1.42)%
ಅರುಣಾಚಲಪ್ರದೇಶ
76.9(+8.74)%
ಸಿಕ್ಕಿಂ
80.96(-2.8)%
ಅಸ್ಸಾಂ
80.13(+10.6)%
ಮಹಿಳೆಯರೇ ಹೆಚ್ಚು
ಕಳೆದ ಏಳು ಹಂತಗಳ ಮತದಾನ ನೋಡಿದಾಗ ಪುರುಷರಿಗಿಂತ
ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಹಾಗೆ ನೋಡಿದರೆ ಮಹಿಳೆಯರು ಮತ್ತು ಪುರುಷರ ಮತದಾರರ ನಡುವೆ ಹೆಚ್ಚಿನ ಅಂತರವಿಲ್ಲ. ಆದರೆ, ಈ ಬಾರಿ ಮಹಿಳೆಯರು ಜಾಗೃತರಾಗಿದ್ದಾರೆ ಎನ್ನುತ್ತಾರೆ ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್ನ ನಿರ್ದೇಶಕಿ ರಂಜನಾ ಕುಮಾರಿ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತಕೇಂದ್ರದತ್ತ ಹೆಜ್ಜೆ ಹಾಕಿದ್ದು ಎರಡು ವಿಚಾರಗಳನ್ನು ಸ್ಪಷ್ಟಪಡಿಸುತ್ತದೆ. ಮೊದಲನೆಯದು ತಮ್ಮ ಹಕ್ಕುಗಳ ಕುರಿತು ಹೆಚ್ಚು ಜಾಗೃತರಾಗಿದ್ದಾರೆ, ಎರಡನೆಯದಾಗಿ ಅವರು ಆಕ್ರೋಶಗೊಂಡಿದ್ದಾರೆ ಎನ್ನುತ್ತಾರೆ ಕುಮಾರಿ.
140 ದಶಲಕ್ಷ
ಏಳನೇ ಹಂತದ ಲೋಕಸಭಾ ಚುನಾವಣೆಯ ವರೆಗೆ ತಮ್ಮ ಹಕ್ಕು ಚಲಾಯಿಸಿದ ಮತದಾರರು.