ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿ ಮಾದರಿ ಉದ್ಯಮಿಗಳಿಗೆ ಸೀಮಿತ

ಲೋಕಸಮರದ ಕೊನೆಯ ಎರಡು ಹಂತದ ಮತದಾನ ಬಾಕಿ ಇರುವಾಗ ಕಾಂಗ್ರೆಸ್‌ನ ಅಮ್ಮ...

Vishwanath S
Updated On : 5 May 2014, 1:48 am

ರೂರ್ಕಿ/ಅಮೇಥಿ: ಲೋಕಸಮರದ ಕೊನೆಯ ಎರಡು ಹಂತದ ಮತದಾನ ಬಾಕಿ ಇರುವಾಗ ಕಾಂಗ್ರೆಸ್‌ನ ಅಮ್ಮ-ಮಗ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ತೀವ್ರಗೊಳಿಸಿದ್ದಾರೆ.
ಭಾನುವಾರ ರೂರ್ಕಿ, ಕುಲುಗಳಲ್ಲಿ ಪ್ರಚಾರ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, 'ಮೋದಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ ತಮ್ಮ ರಾಜ್ಯದಲ್ಲಿ ಏಕೆ ಇನ್ನೂ ಲೋಕಾಯುಕ್ತರನ್ನು ನೇಮಕ ಮಾಡಿಲ್ಲ' ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ವಿರುದ್ಧ ಸೆಣಸಲು ಕಾಂಗ್ರೆಸ್ ಮಾಹಿತಿ ಹಕ್ಕು ಕಾಯ್ದೆ ಎನ್ನುವ ಅಸ್ತ್ರವನ್ನು ಜನರ ಕೈಗೆ ನೀಡಿದೆ ಎಂದು ಹೇಳಿಕೊಂಡರು. ಸ್ವಕ್ಷೇತ್ರ ಅಮೇಥಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿ ಪ್ರಧಾನಿಯಾದರೆ ಯುಪಿಎ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ, ಆಹಾರ ಭದ್ರತೆಯಂತಹ ಯೋಜನೆಗಳನ್ನು ರದ್ದುಗೊಳಿಸುತ್ತಾರೆ ಎಂದಿದ್ದಾರೆ.
ರೋಡ್ ಶೋ
ಹತ್ತು ವರ್ಷಗಳಿಂದ ರಾಹುಲ್ ಪ್ರತಿನಿಧಿಸುತ್ತಿರುವ ಅಮೇಥಿಯಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು ಒಂದು ದಿನ ಬಾಕಿ ಇರುವಾಗ ರಾಹುಲ್ ಮತ್ತು ಪ್ರಿಯಾಂಕಾ ಭಾನುವಾರ ಭರ್ಜರಿ ರೋಡ್ ಶೋ ನಡೆಸಿದರು. ಇದು ಇವರಿಬ್ಬರೂ ನಡೆಸಿದ ಎರಡನೇ ರೋಡ್ ಶೋ. ಏ.12ರಂದು ಸೋನಿಯಾ ಕೂಡ ಮಕ್ಕಳಿಗೆ ಸಾಥ್ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಪರ ಮೋದಿ ಸೋಮವಾರ ಅಮೇಥಿಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement