ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಈ ಕೂಡಲೇ ಶಾ ಬಂಧಿಸಿ

'ಅಜಂಗಡ ಭಯೋತ್ಪಾದಕರ ನೆಲೆ' ಎಂದಿದ್ದ ಮೋದಿ ಪರಮಾಪ್ತ ಅಮಿತ್ ಶಾ...

Vishwanath S
Updated On : 6 May 2014, 10:35 am

ನವದೆಹಲಿ: 'ಅಜಂಗಡ ಭಯೋತ್ಪಾದಕರ ನೆಲೆ' ಎಂದಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರಮಾಪ್ತ ಅಮಿತ್ ಶಾ ವಿರುದ್ಧ ಉತ್ತರ ಪ್ರದೇಶದ ಅಷ್ಟೂ ರಾಜಕೀಯ ಪಕ್ಷಗಳು ತಿರುಗಿ ಬಿದ್ದಿವೆ.
ಮೋದಿ ಮತ್ತು ಅವರ ಆಪ್ತ ಅಮಿತ್ ಶಾ ಇಬ್ಬರೂ ಮತೀಯ ವಿಚಾರ ಇಟ್ಟುಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಉತ್ತರ ಪ್ರದೇಶಕ್ಕೆ ಬರದಂತೆ ತಡೆಯಬೇಕು ಎಂದು ಬಿಎಸ್‌ಪಿ ನಾಯಕರಿ ಮಾಯಾವತಿ ಆಗ್ರಹಿಸಿದ್ದಾರೆ.
ಕೋಮು ಸೌಹಾರ್ದ ಕೆಡಿಸುವಂಥ ಹೇಳಿಕೆ ನೀಡಿರುವ ಅಮಿತ್ ಶಾರನ್ನು ಈ ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಮೀಮ್ ಅಫ್ಜಲ್ ಒತ್ತಾಯಿಸಿದ್ದಾರೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಮುಂದೆ ಬರಬೇಕು. ದೇಶಾದ್ಯಂತ ಪ್ರಚಾರ ನಡೆಸದಂತೆ ನಿಷೇಧ ಹೇರಬೇಕು ಎಂದು ಹೇಳಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಕೇವಲ ಎಫ್‌ಐಆರ್ ದಾಖಲಿಸುವಂತೆ ಸೂಚಿಸುವುದಲ್ಲದೇ, ಬಂಧಿಸುವಂತೆಯೂ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಇತ್ತೀಚೆಗೆ ಮೋದಿ ಮತ್ತು ಅಮಿತ್ ಶಾ ಅವರು ಅಭಿವೃದ್ಧಿ ಮಂತ್ರದಿಂದ ಕೋಮುವಾದದತ್ತ ಹೊರಳಿದ್ದಾರೆ. ಅಭಿವೃದ್ಧಿ ಆಧಾರದಲ್ಲಿ ಮತ ಕೀಳಲು ಸಾಧ್ಯವಾಗದೇ ಈ ದಾರಿ ಆರಿಸಿಕೊಂಡಿದ್ದಾರೆ ಎಂದು ಮೀಮ್ ಅಫ್ಜಲ್ ಆರೋಪಿಸಿದ್ದಾರೆ.
ಅಮಿತ್ ಶಾ ಅವರು ಕೋಮು ಸೌಹಾರ್ದ ಕೆಡಿಸುವ ಕೆಲಸ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ, ಇವರನ್ನು ಉತ್ತರ ಪ್ರದೇಶಕ್ಕೆ ಬರದಂತೆ ನಿಷೇಧ ಮಾಡಿ ಎಂದು ಮಾಯಾವತಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement