ಇಂದು 8 ಘಟ್ಟ
ಚುನಾವಣೆಯ ಎಂಟನೇ ಹಂತದ ಮತದಾನ ಒಟ್ಟು ಏಳು ರಾಜ್ಯಗಳ 64 ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿದೆ...
ನವದೆಹಲಿ: ಚುನಾವಣೆಯ ಎಂಟನೇ ಹಂತದ ಮತದಾನ ಒಟ್ಟು ಏಳು ರಾಜ್ಯಗಳ 64 ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ, ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಇತರ ಮೈತ್ರಿಕೂಟಗಳಿಗೆ ಕೊನೆಯ ಎರಡು ಹಂತಗಳು ಸವಾಲಾಗಿ ಪರಿಣಮಿಸಲಿವೆ. ಉತ್ತರಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ತನ್ನ ಪ್ರಮುಖ ನಾಯಕರಾದ ಗುಲಾಂ ನಬಿ ಆಜಾದ್, ಮುಕುಲ್ ವಾಸ್ನಿಕ್, ಅಶೋಕ್ ಗೆಹ್ಲೋಟ್, ರಾಜೀವ್ ಶುಕ್ಲಾ, ಅವಿನಾಶ್ ಪಾಂಡೆ ಸೇರಿದಂತೆ ಪ್ರಮುಖರನ್ನು ವಾರಾಣಸಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಈಗಾಗಲೇ ಕಳುಹಿಸಿಕೊಟ್ಟಿದೆ.
ಕಣದಲ್ಲಿ ಪ್ರಮುಖರು
ರಾಹುಲ್ ಗಾಂಧಿ (ಅಮೇಠಿ)
ಸ್ಮೃತಿ ಇರಾನಿ (ಅಮೇಠಿ)
ವರುಣ್ ಗಾಂಧಿ (ಸುಲ್ತಾನ್‌ಪುರ)
ಬೇಣಿ ಪ್ರಸಾದ್ ವರ್ಮಾ (ಗೊಂಡಾ)
ಮೊಹಮ್ಮದ್ ಕೈಫ್ (ಫೂಲ್‌ಪುರ್)
ರಾಮ್ ವಿಲಾಸ್ ಪಾಸ್ವಾನ್ (ಹಾಜೀಪುರ)
ರಾಬ್ರಿ ದೇವಿ ಮತ್ತು ರಾಜೀವ್ ಪ್ರತಾಪ್ ರೂಡಿ (ಸಾರನ್)
ಅನುರಾಗ್ ಠಾಕೂರ್ (ಹಮೀರ್‌ಪುರ್)
ಏಳು ರಾಜ್ಯಗಳ 64 ಕ್ಷೇತ್ರಗಳಲ್ಲಿ ನಡೆದಿದೆ ಬಿರುಸಿನ ಮತದಾನ. ರಾಹುಲ್, ವರುಣ್ ಸೇರಿದಂತೆ 897 ಅಭ್ಯರ್ಥಿಗಳು ಕಣದಲ್ಲಿ
ಆಂಧ್ರಪ್ರದೇಶ
ಒಟ್ಟು ಸ್ಥಾನ 42
ನಡೆವ ಸ್ಥಾನ 25
ಅಭ್ಯರ್ಥಿಗಳು 333
ಬಿಹಾರ
ಒಟ್ಟು ಸ್ಥಾನ 40
ನಡೆವ ಸ್ಥಾನ 07
ಅಭ್ಯರ್ಥಿಗಳು 118
ಹಿಮಾಚಲಪ್ರದೇಶ
ಒಟ್ಟು ಸ್ಥಾನ 04
ನಡೆವ ಸ್ಥಾನ 04
ಅಭ್ಯರ್ಥಿಗಳು 38
ಜಮ್ಮು-ಕಾಶ್ಮೀರ
ಒಟ್ಟು ಸ್ಥಾನ 06
ನಡೆವ ಸ್ಥಾನ 12
ಅಭ್ಯರ್ಥಿಗಳು 19
ಉತ್ತರ ಪ್ರದೇಶ
ಒಟ್ಟು ಸ್ಥಾನ 80
ನಡೆವ ಸ್ಥಾನ 15
ಅಭ್ಯರ್ಥಿಗಳು 243
ಉತ್ತರಾಖಂಡ
ಒಟ್ಟು ಸ್ಥಾನ 05
ನಡೆವ ಸ್ಥಾನ 05
ಅಭ್ಯರ್ಥಿಗಳು 74
ಪಶ್ಚಿಮ ಬಂಗಾಳ
ಒಟ್ಟು ಸ್ಥಾನ 42
ನಡೆವ ಸ್ಥಾನ 06
ಅಭ್ಯರ್ಥಿಗಳು 72
ಒಟ್ಟು ಅಭ್ಯರ್ಥಿಗಳು 1,737
ಮತದಾರರು 9.55 ಕೋಟಿ
ಒಟ್ಟು ರಾಜ್ಯ 07
ಸ್ಥಾನಗಳು 64
ಸೀಮಾಂಧ್ರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆ
ಲೋಕಸಭೆ ಚುನಾವಣೆ ಜತೆಗೆ ಸೀಮಾಂಧ್ರ ಪ್ರದೇಶದಲ್ಲಿ ವಿಧಾನಸಭೆಗೂ ಮತದಾನ ನಡೆಯುತ್ತಿದೆ. ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಸಾಧನೆ ಮಾಡಿತ್ತು. ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಸೇರಿದಂತೆ ಕಿರಣ್ ರೆಡ್ಡಿ ಸಂಪುಟದಲ್ಲಿ ಸಚಿವರಾಗಿದ್ದ ಪ್ರಮುಖರು
ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಈ ಬಾರಿಯ ವಿಶೇಷತೆ ಏನೆಂದರೆ ವೈ.ಎಸ್.
ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪೂರ್ಣ
ಪ್ರಮಾಣದಲ್ಲಿ ಚುನಾವಣೆ ಎದುರಿಸುತ್ತಿದೆ.