ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಿಶ್ವಾಸ್, ಭಾರತಿ ವಿರುದ್ಧ ಎಫ್‌ಐಆರ್

ಆಪ್ ನಾಯಕರಾದ ಕುಮಾರ್ ವಿಶ್ವಾಸ್ ಮತ್ತು ಸೋಮನಾಥ್ ಭಾರ್ತಿ...

Vishwanath S
Updated On : 7 May 2014, 12:50 pm

ಅಮೇಠಿ:  ಆಪ್ ನಾಯಕರಾದ ಕುಮಾರ್ ವಿಶ್ವಾಸ್ ಮತ್ತು ಸೋಮನಾಥ್ ಭಾರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರಿಬ್ಬರ ಜತೆಗೆ 40 ಮಂದಿ ಕಾರ್ಯಕರ್ತರ ವಿರುದ್ಧವೂ ಕೇಸು ದಾಖಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಅವಧಿ ಮೀರಿ ಪ್ರಚಾರ ನಡೆಸಿದ ಆರೋಪವನ್ನು ಆಪ್ ನಾಯಕರ ವಿರುದ್ಧ ಹೊರಿಸಲಾಗಿದೆ. ಇದೇ ವೇಳೆ ಕುಮಾರ್ ವಿಶ್ವಾಸ್ ಪೊಲೀಸರು ತಮ್ಮ ಕುಟುಂಬವನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗಿರಿರಾಜ್ ಸಿಂಗ್ ಶರಣು
ಪಟನಾ: ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಕೊನೆಗೂ ಪಟನಾದ ನ್ಯಾಯಾಲಯದ ಮುಂದೆ ಶರಣಾದರು. ನ್ಯಾಯಾಧೀಶರಾದ ಜಾವೇದ್ ಆಲಂ ಜಾಮೀನು ಬಾಂಡ್ ಸ್ವೀಕರಿಸಿ ಸಿಂಗ್‌ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದಕ್ಕೆ, ಸಿಂಗ್ ವಿರುದ್ಧ ದೇವಗಡ, ಬೊಕಾರೋ ಮತ್ತು ಪಟನಾ ಪೊಲೀಸ್ ಠಾಣೆಗಳಲ್ಲಿ 3 ದೂರುಗಳು ದಾಖಲಾಗಿದ್ದವು. ಬೊಕಾರೋ ಠಾಣೆಗೆ ಸಂಬಂಧಿಸಿದಂತೆ ಜಾರ್ಖಂಡ್ ಹೈ ಕೋರ್ಟ್ ಸಿಂಗ್‌ರಿಗೆ ಜಾಮೀನು ನೀಡಿತ್ತು. ಏ.25ರಂದು ಜಿಲ್ಲಾ ನ್ಯಾಯಾಧೀಶ ವೀರೇಂದ್ರ ಕುಮಾರ್ ನಿರೀಕ್ಷಣಾ ಜಾಮೀನಿನ ಮೇರೆಗೆ ಸಿಂಗ್‌ರನ್ನು ಬಿಡುಗಡೆ ಮಾಡಿದ್ದರು.

ಅಮಿತ್ ಶಾ ಉಗ್ರವಾದಿ
ಪಟನಾ: ಬಿಜೆಪಿ ನಾಯಕ ಅಮಿತ್ ಶಾರನ್ನು ಉಗ್ರವಾದಿಯೆಂದು ಆರ್.ಜೆ.ಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಕರೆದಿದ್ದಾರೆ. ಅಜಂಗಡ ಉಗ್ರರ ತಾಣವೆಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಲಾಲೂ ಹೀಗೆಂದರು. ಗುಜರಾತ್ ಮತ್ತು ಮುಜಾಫರ್‌ನಗರದಲ್ಲಿ ನಡೆದ ಕೋಮು ಗಲಭೆ ಹಿಂದೆ ನರೇಂದ್ರ ಮೋದಿ ಮತ್ತು ಬಲಗೈ ಬಂಟ ಅಮಿತ್ ಶಾ ಕೈವಾಡವಿದೆ. ಸೋಲುತ್ತೇವೆಂಬ ಭಯದಿಂದ ತಮ್ಮ ನಿಜವಾದ ಬಣ್ಣ ಬಯಲು ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಇವರಿಬ್ಬರು ದೇಶದಲ್ಲಿ ಕೋಮುವಾದಿ ಕಿಚ್ಚು ಹಚ್ಚಿಬಿಡುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement