ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪ್ರತಿಪಕ್ಷ ನಾಯಕ ಸ್ಥಾನವೇ ಇಲ್ಲ?

Rashmi Kasaragodu
Updated On : 17 May 2014, 1:45 am

ಬಹು ನಿರೀಕ್ಷಿತ 'ಲೋಕ' ಫಲಿತಾಂಶ ಬಂದದ್ದಾಯ್ತು. ದೇಶಾದ್ಯಂತ ಎದ್ದ ಬಿರುಸಿನ ಅಲೆಯಲ್ಲಿ ಮೋದಿ ಅವರನ್ನು ಪ್ರಧಾನಿ ಸ್ಥಾನದಲ್ಲಿ ನೋಡಬೇಕೆನ್ನುವ ಕೋಟಿ ಕೋಟಿ ಕನಸುಗಳು ನನಸಾದವು. ಇದೆಲ್ಲದ ಜೊತೆ ಮತ್ತೊಂದು ಕುತೂಹಲಕರ ಅಂಶವೊಂದಿದೆ. ಅದೇನೆಂದರೆ, ಈ ಬಾರಿಯ 16ನೇ ಲೋಕಸಭೆಗೆ ಪ್ರಾಯಶಃ ಪ್ರತಿಪಕ್ಷ ನಾಯಕನ ಸ್ಥಾನ ಇರುವುದಿಲ್ಲ!
ಹೌದು. ಅಚ್ಚರಿಯೆನಿಸಿದರೂ ಇದು ಸತ್ಯ. ನಮಗೆಲ್ಲಾ ಗೊತ್ತಿರುವಂತೆ ಲೋಕಸಭಾ ಸದಸ್ಯರ ಸಂಖ್ಯೆ 543. ಸಂವಿಧಾನದ ಪ್ರಕಾರ, ಯಾವ ಪಕ್ಷ ಒಟ್ಟು ಲೋಕಸಭಾ ಸ್ಥಾನಗಳಲ್ಲಿ ಹತ್ತನೇ ಒಂದರಷ್ಟು ಸ್ಥಾನಗಳನ್ನು ಪಡೆದಿರುತ್ತದೋ, ಆ ಪಕ್ಷದ ಮುಖಂಡರೊಬ್ಬರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಅರ್ಹರಾಗುತ್ತಾರೆ. ಪ್ರಸ್ತುತ, 16ನೇ ಲೋಕಸಭೆಯಲ್ಲಿ ಬಿಜೆಪಿ, ತನ್ನ ಮಿತ್ರಪಕ್ಷಗಳೊಂದಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವಲ್ಲಿ ದಾಪುಗಾಲಿಟ್ಟಿದೆ. ಇನ್ನು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿರುವ ಕಾಂಗ್ರೆಸ್, 44 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದೆ. ಪ್ರತಿಪಕ್ಷ ನಾಯಕನ ಸ್ಥಾನ ಸಿಕ್ಕರೆ ಈ ಪಕ್ಷಕ್ಕೇ ಸಿಗಬೇಕು. ಆದರೆ, ಆ ಪಕ್ಷಕ್ಕೆ 10ನೇ ಒಂದರಷ್ಟು ಸ್ಥಾನಗಳು ಈ ಬಾರಿ ಲಭ್ಯವಾಗಿಲ್ಲ. ಹಾಗಾಗಿ, ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕಾಂಗ್ರೆಸ್ ತರವಲ್ಲ. ಕಾಂಗ್ರೆಸ್ ಬಿಟ್ಟರೆ ಉಳಿದೆಲ್ಲಾ ಪಕ್ಷಗಳು (ಎನ್‌ಡಿಎ ಅಂಗಪಕ್ಷಗಳ ಹೊರತಾಗಿ) ಇನ್ನೂ ಕಡಿಮೆ ಸ್ಥಾನಗಳನ್ನು ಪಡೆದಿರುವುದರಿಂದ ಆ ಪಕ್ಷಗಳಿಗೂ ಪ್ರತಿಪಕ್ಷ ಸ್ಥಾನ ಸಿಗುವುದಿಲ್ಲ.   ಆದರೆ, 16ನೇ ಲೋಕಸಭೆಗೆ ಆಯ್ಕೆಯಾಗುವ ಸ್ಪೀಕರ್ ಅವರು ಮನಸ್ಸು ಮಾಡಿದರೆ,  ಸಂವಿಧಾನದ ಕ್ರಮ ಅನುಸರಿಸಿ ವಿರೋಧ ಪಕ್ಷದ ನಾಯಕನ ಸ್ಥಾನ ತುಂಬಬಹುದು.
ಹಿಂದೆಯೂ ಹೀಗಾಗಿತ್ತು...
ಹೀಗೆ, ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇರುವ ಪ್ರಮೇಯ ಹಿಂದೆಯೂ ಹಲವಾರು ಬಾರಿ ಬಂದೊದಗಿದೆ. 1552ರ ಮೊದಲ ಲೋಕಸಭೆ ಚುನಾವಣೆಯಿಂದ ಹಿಡಿದು ಆನಂತರ ಸತತ ಐದು ಲೋಕಸಭೆಗಳಿಗೆ (1977) ಪ್ರತಿಪಕ್ಷ ನಾಯಕನ ಸ್ಥಾನವಿರಲಿಲ್ಲ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement