ಮಿತ್ರಪಕ್ಷ ಕೈ ಬಿಡಲ್ಲ: ಬಿಜೆಪಿ
ನವದೆಹಲಿ: ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಕ್ಷ ಗಳಿಸಿದ್ದರೂ ಎನ್‌ಡಿಎ ಜತೆಗೂಡಿಯೇ ಸರ್ಕಾರ ರಚಿಸುವುದಾಗಿ ಬಿಜೆಪಿ ಹೇಳಿದೆ. 'ದೇಶದ ಅಭಿವೃದ್ಧಿಯಲ್ಲಿ ಎಲ್ಲರನ್ನೂ ಜತೆಗೆ ಒಯ್ಯಬೇಕು ಎನ್ನುವುದು ಪಕ್ಷದ ಬಯಕೆ. ಹೀಗಾಗಿ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿದ್ದರೂ ಎನ್‌ಡಿಎ ಜತೆಗೂಡಿಯೇ ಸರ್ಕಾರ ರಚಿಸುತ್ತೇವೆ' ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಅಮಿತ್ ಶಾ ಪ್ರತ್ಯೇಕ ಹೇಳಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಶಿವಸೇನೆ, ಟಿಡಿಪಿ, ಲೋಕಜನಶಕ್ತಿ ಪಾರ್ಟಿಗಳು ಎನ್‌ಡಿಎ ಪ್ರಮುಖ ಅಂಗಪಕ್ಷಗಳು.