ವಾರಾಣಸಿಗೆ ಮೋದಿ ಇಂದು
ನರೇಂದ್ರ ಮೋದಿ ಶನಿವಾರ ವಾರಾಣಸಿಗೆ ಭೇಟಿ ನೀಡಲಿದ್ದಾರೆ. ನಗರದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಲಿರುವ ಅವರು ಅದಕ್ಕೂ ಮೊದಲು ಕಾಶಿವಿಶ್ವನಾಥ ದೇವರ ದರ್ಶನ ಪಡೆಯಲಿದ್ದಾರೆ. ನಂತರ ಗಂಗಾ ಆರತಿ ಮತ್ತಿತರ ಪೂಜೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸದರಾಗಿ ಆಯ್ಕೆಯಾದ ಬಳಿಕ ಇದು ಮೋದಿ ಅವರ ಮೊದಲ ಭೇಟಿ ಆಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಸಂಸದೀಯ ಮಂಡಳಿ ಸಭೆ: ಇದಕ್ಕೂ ಮೊದಲು ದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದು. ಈ ಸಭೆಯಲ್ಲಿ ಮೋದಿ ಅವರೂ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರಿಗೆ ಪಕ್ಷದ ವತಿಯಿಂದ ಈ ವೇಳೆ ಅದ್ಧೂರಿ ಸ್ವಾಗತ ಸಿಗಲಿದೆ