ಮೋದಿ ಅಲೆಯ ಒಂದಿಷ್ಟು ಚಿಲಿಪಿಲಿ
ಮೋದಿ ಸಮೀಕರಣಗಳನ್ನೆಲ್ಲ ಹೇಗೆ ಬದಲಾಯಿಸುತ್ತಿದ್ದಾರೆ ನೋಡಿ. ಈ ಮೊದಲು ರಾಷ್ಟ್ರೀಯ ವಾಹಿನಿಯಲ್ಲಿ ಗಂಗಾ ಆರತಿಯಂಥ ಕಾರ್ಯಕ್ರಮಗಳ ನೇರ ಪ್ರಸಾರ ನಾವು ನೋಡುವುದಕ್ಕೆ ಸಾಧ್ಯವಿತ್ತಾ?
-ವಾಸುದೇವನ್ ಎ. ಆರ್.
ಮೋದಿ: ಬನ್ರೀ, ಸ್ವಲ್ಪ ಮಜಾ ತಗೋಳೋಣ.
ಅಮಿತ್ ಶಾ: ಹೆಂಗೆ ಭಾಯ್?
ಮೋದಿ: ಮಾಯಾವತಿಯವರಿಗೆ ಫೋನ್ ಹಚ್ಚಿ, ಬಿಜೆಪಿಗೆ ಬೆಂಬಲ ಕೊಡ್ತೀರಾ ಅಂತ ಕೇಳೋಣ.
-ಫನ್ನಿ
ರಾಹುಲ್ ಗಾಂಧಿಯವರೂ ರಾಜೀನಾಮೆ ಕೊಡುವ ಸಾಧ್ಯತೆ. ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರೆಲ್ಲ ಒಂದೊಂದು ಲಾಲಿಪಾಪ್ ಕೊಟ್ಟು ಸುಮ್ಮನಾಗಿಸುವ ಯೋಜನೆ ಹಾಕಿಕೊಂಡಿದ್ದಾರಂತೆ.
-ರಾಜದೀಪ್ ಚಕ್ರವರ್ತಿ
ಕಾಂಗ್ರೆಸ್ಸೇ ಮೋದಿ ಅಲೆಯನ್ನು ಒಪ್ಪಿಕೊಂಡಂಥ ಸಂದರ್ಭದಲ್ಲೂ ಆಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅದಕ್ಕೆ ಶ್ರೇಯಸ್ಸು ನೀಡುತ್ತಿಲ್ಲ. ಎಂಥ ದುರಂತ!
-ಪ್ರವೀಣ್ ಶೇಠ್
ಚಾಯ್ವಾಲಾ, ಉಳಿದವರೆಲ್ಲ ತಮ್ಮ ಕಾಫಿ ಮರೆಯುವಂತೆ ಮಾಡಿದರು.
-ಪ್ರಶಾಂತ್
ಚಹಾ ಮಾರುವವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ. ರಾಜಮನೆತನದಿಂದ ಭಾರತ ಮುಕ್ತವಾಗಿದೆ.
-ಸಿಧು
ಎನ್ಡಿಎ ಜಯದ ಶೇಕಡ 95ರ ಶ್ರೇಯಸ್ಸು ಮೋದಿಯವರಿಗೆ ಸಲ್ಲಬೇಕು. ಉಳಿದ ಶೇ. 5 ಶ್ರೇಯಸ್ಸು 'ಅಬ್ ಕಿ ಬಾರ್ ಮೋದಿ ಸರ್ಕಾರ್' ಎಂಬ ಘೋಷ ಬರೆದ ಬರಹಗಾರನಿಗೆ ಸಲ್ಲುತ್ತದೆ.
-ಕಿಶನ್ ಗಾರ್ಗ್
ಆರು ದಶಕಗಳ ಹಿಂದೆ ಗುಜರಾತಿಯೊಬ್ಬ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ. ಅರವತ್ತೈದು ವರ್ಷಗಳ ನಂತರ ಭಾರತದ ವಿಮೋಚನೆಗೆ ಇತಿಹಾಸ ಮರುಕಳಿಸುತ್ತಿದೆ.
-ಅಪ್ಪಿ ಮಿಶಾಲ್
'ಕಾಂಗ್ರೆಸ್ ಮುಕ್ತ ಭಾರತ' ಈಗ ವಾಸ್ತವವಾಗಿದೆ. ಏಕೆಂದರೆ ಪ್ರತಿಪಕ್ಷದಲ್ಲಿ ನಾಯಕರಾಗಿ ಕೂರುವ ಅರ್ಹತೆಯೇ ಅವರಿಗಿಲ್ಲವಾಗಿದೆ. ಮೋದಿಜೀ ನೀವು ಸಾಧಿಸಿದಿರಿ!
-ಶಿವರಾಜ್ಸಿಂಗ್ ಚೌಹಾಣ್, ಮಧ್ಯಪ್ರದೇಶದ ಮುಖ್ಯಮಂತ್ರಿ
ಪ್ರಧಾನಿಯಾದಾಗ ಆಶೀರ್ವಾದ ತೆಗೆದುಕೊಳ್ಳುವುದಕ್ಕೆ ಅಮ್ಮನನ್ನು ಹೊಂದಿದ್ದ ಪ್ರಧಾನಿ ಎಂದರೆ ನರೇಂದ್ರ ಮೋದಿ ಅವರೊಬ್ಬರೇ. ಮೋದಿ ತಾಯಿಗೆ ಎಂಥ ಸಾರ್ಥಕ ಕ್ಷಣಗಳಿರಬಹುದು!
-ಕಿರಣ್ಕುಮಾರ್ ಎಸ್.
ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲವು ಚುನಾವಣಾ ಇತಿಹಾಸದಲ್ಲೇ ಸುನಾಮಿಯಂಥದ್ದು.
-ಅಂಕಿತ್ ಸಿಂಗ್
ಪಾಕಿಸ್ತಾನಕ್ಕೆ ಶುಕ್ರವಾರ ಮಧ್ಯಮ ಪ್ರಮಾಣದ ಭೂಕಂಪ ತಗುಲಿತೆಂಬ ಸುದ್ದಿ ಬಂದಿದೆ. ಅದು ನಮೋ ಸುನಾಮಿಯೇ ಆಗಿದ್ದಿರಬಹುದು.
-ಹರ್ಷಿತಾ ಕಪೂರ್
ಕಾಂಗ್ರೆಸ್ ಮತ್ತು ಆಪ್ಗಳು ಈಗ ಮೋದಿ ಹೈಡ್ರೆಶನ್ನಿಂದ ಬಳಲುತ್ತಿವೆ.
-ಕೂಲ್ಫನ್ನಿ ಟೀಶರ್ಟ್
ಕಳೆದ ಹತ್ತು ವರ್ಷಗಳ ಹತಾಶೆಯನ್ನು ಕೊನೆಗೊಳಿಸಿದ್ದಕ್ಕೆ ಕಾಂಗ್ರೆಸ್ಗೆ ಧನ್ಯವಾದ.
-ರತ್ನಾಕರ
ಸೆನ್ಸೆಕ್ಸ್ ಹೈ ಪಚ್ಚೀಸ್ ಹಜಾರ್. ಅಬ್ ಕಿ ಬಾರ್ ಮೋದಿ ಸರ್ಕಾರ್!
-ಸ್ವಪನ್ ಸೇಠ್
ಮುಖ್ಯವಾಹಿನಿ ಮಾಧ್ಯಮ ಕಳೆದೊಂದು ದಶಕದಿಂದ ಮೋದಿಯವರನ್ನು ಹೇಗೆ ಚಿತ್ರಿಸಿತು ಎಂದು ಅಧ್ಯಯನಕಾರರು ಪುಸ್ತಕ ಹೊರತರಬೇಕು. ಅವರಿಗೆಲ್ಲ ತುಸುವಾದರೂ ಮುಜುಗರವಾಗಬೇಕಿದೆ.
-ಸ್ವಪನ್ದಾಸ್ ಗುಪ್ತ