ಚಿಕನ್ ಕೈಮಾ ಬೋಂಡಾ 
ಅಡುಗೆ

ಚಿಕನ್ ಕೈಮಾ ಬೋಂಡಾ- Chicken Keema Bonda Recipe in kannada

ರುಚಿಕರವಾದ ಚಿಕನ್ ಕೈಮಾ ಬೋಂಡಾ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಚಿಕನ್ ಕೈಮಾ- 1/4 ಕೆ.ಜಿ

  • ಈರುಳ್ಳಿ -1

  • ಕಡಲೆ ಹಿಟ್ಟು-4 ಚಮಚ

  • ಮೈದಾ ಹಿಟ್ಟು-1 ಚಮಚ

  • ಕಾರ್ನ್‌ ಫ್ಲೋರ್- 1 ಚಮಚ

  • ಹಸಿಮೆಣಸಿನಕಾಯಿ- 2

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ

  • ಅಚ್ಚ ಖಾರದಪುಡಿ-2 ಚಮಚ

  • ಗರಂ ಮಸಾಲೆ ಪುಡಿ- ಸ್ವಲ್ಪ

  • ಕಾಳು ಮೆಣಸಿನ ಪುಡಿ- ಸ್ವಲ್ಪ

  • ಕರಿಬೇವು- ಸ್ವಲ್ಪ

  • ಕೊತ್ತಂಬರಿ ಸೊಪ್ಪು-ಸ್ವಲ್ಪ

  • ಉಪ್ಪು- ರುಚಿಗೆ ತಕ್ಕಷ್ಟು

  • ಎಣ್ಣೆ- ಕರಿಯಲು

ಮಾಡುವ ವಿಧಾನ...

  • ಚಿಕನ್ ಕೈಮಾವನ್ನು ಮಿಕ್ಸಿಯಲ್ಲಿ ಒಂದೆರೆಡು ಸುತ್ತು ರುಬ್ಬಕೊಳ್ಳಿ.

  • ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ, ಕಡಲೆಹಿಟ್ಟು, ಮೈದಾಹಿಟ್ಟು, ಕಾರ್ನ್‌ಫ್ಲೋರ್, ಕಾರದಪುಡಿ, ಗರಂಮಸಾಲಾ, ಮೆಣಸಿನಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ನೀರು ಹಾಕದೆ ಚೆನ್ನಾಗಿ ಕಲಸಿ.

  • ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ. ಇದೀಗ ರುಚಿಕರವಾದ ಕೈಮಾ ಬೋಂಡಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!

ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ. ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ..!

ಬೇಲ್ ಚಿತ್ರದ ಪ್ರಚಾರ ಕಾರ್ಯಕ್ರಮ ವೇಳೆ ಪಟಾಕಿ ಸ್ಫೋಟ: ಶಿವಣ್ಣ ಕೂದಲೆಳೆ ಅಂತರದಲ್ಲಿ ಪಾರು!

'ಫಾರ್ಮ್ 6'ರಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಕುರಿತು ರಾಹುಲ್ ಗಾಂಧಿಯದ್ದು ದಾರಿ ತಪ್ಪಿಸುವ ಹೇಳಿಕೆ: ಚುನಾವಣಾ ಆಯೋಗ