ಜೀರಾ ರೈಸ್ | Jeera rice Recipe in Kannada
ರುಚಿಕರವಾದ ಜೀರಾ ರೈಸ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
ಅಕ್ಕಿ- 1 ಬಟ್ಟಲು
ಈರುಳ್ಳಿ- 1
ಜೀರಿಗೆ- 3 ಚಮಚ
ತುಪ್ಪ- 4 ಚಮಚ
ಗೋಡಂಬಿ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಹಸಿಮೆಣಸಿನ ಕಾಯಿ- 2-3
ಪಲಾವ್ ಸಾಮಾಗ್ರಿಗಳು- ಸ್ವಲ್ಪ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಮಾಡುವ ವಿಧಾನ...
ಅಕ್ಕಿಯನ್ನು 15 ನಿಮಿಷ ನೆನೆಸಿಟ್ಟು, ಚೆನ್ನಾಗಿ ತೊಳೆದಿಟ್ಟುಕೊಳ್ಳಿ.
ಇದೀಗ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ತುಪ್ಪ ಹಾಕಿ. ಕಾದ ನಂತರ ಜೀರಿಗೆ, ಗೋಡಂಬಿ, ಪಲಾವ್ ಸಾಮಾಗ್ರಿ, ಹಸಿಮೆಣಸಿನಕಾಯಿ, ಈರುಳ್ಳಿ ಕೆಂಪಗೆ ಹುರಿದುಕೊಳ್ಳಿ.
ನಂತರ ಅಕ್ಕಿ, ಉಪ್ಪು ಹಾಗೂ ಅಕ್ಕಿ ಅಳತೆ ಮಾಡಿದ ಬಟ್ಟಲಿನಲ್ಲೇ 2 ಬಟ್ಟಲು ನೀರು ಹಾಕಿ. 2 ಕೂಗು ಕೂಗಿಸಿಕೊಂಡು, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಜೀರಾ ರೈಸ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.