ಡ್ರೈವಿಂಗ್ ಲೈಸೆನ್ಸ್ Online Desk
ಗ್ಯಾಡ್ಜೆಟ್ಸ್

DL ಕಳೆದುಹೋಯಿತಾ? RTO ಕಚೇರಿಗೆ ಅಲೆಯೋ ಬದಲು, ಮೊಬೈಲ್‌ನಲ್ಲೇ ಹೀಗೆ ಡೌನ್‌ಲೋಡ್ ಮಾಡಿ!

DL ಕಳೆದುಹೋತ್ತಾ? ಈಗ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ, ಕಳೆದುಹೋದು ಹೋದ ಲೈಸೆನ್ಸ್ ಗಾಗಿ RTO ಕಚೇರಿಗೆ ಅಲೆದಾಡುವ ಬದಲು ಕೇವಲ ನಾಲ್ಕೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್‌ನಲ್ಲೇ ಡಿಜಿಟಲ್ ಚಾಲನಾ ಪರವಾನಗಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ ಕುರಿತ ವರದಿ ಇಲ್ಲಿದೆ.

ನಿಮ್ಮ ಡ್ರೈವಿಂಗ್ ಲೈಸೆನ್ಸ್ ಎಲ್ಲಾದರೂ ಕಳೆದುಹೋಗಿದ್ದರೆ ಅಥವಾ ಹಾಳಾಗಿದ್ದರೆ ಈಗ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ, ಕಳೆದುಹೋದು ಹೋದ ಲೈಸೆನ್ಸ್ ಕಾರಣ RTO ಕಚೇರಿಗೆ ಅಲೆದಾಡುವ ಬದಲು ಕೇವಲ ನಾಲ್ಕೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್‌ನಲ್ಲೇ ಡಿಜಿಟಲ್ ಚಾಲನಾ ಪರವಾನಗಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಡಿಜಿಟಲ್ ಪ್ರತಿಯು ಕಾನೂನುಬದ್ಧವಾಗಿ ಮೂಲ ದಾಖಲೆಯಷ್ಟೇ ಮಾನ್ಯತೆ ಹೊಂದಿದೆ. ಆ ಕುರಿತ ವರದಿ ಇಲ್ಲಿದೆ.

ಮೊಬೈಲ್‌ನಲ್ಲಿ ಡಿಎಲ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಡಿಜಿಟಲ್ ಡಿಎಲ್ ಪಡೆಯಲು ಎರಡು ಸುಲಭ ಮತ್ತು ಸುರಕ್ಷಿತ ವಿಧಾನಗಳಿವೆ.

ವಿಧಾನ 1: ಡಿಜಿಲಾಕರ್ ಆಪ್ ಮೂಲಕ

  • ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಡಿಜಿಲಾಕರ್ ಆಪ್ ಡೌನ್‌ಲೋಡ್ ಮಾಡಿ.

  • ನಿಮ್ಮ ಆಧಾರ್ ಕಾರ್ಡ್ ಮತ್ತು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬಳಸಿ ಸೈನ್-ಅಪ್ ಮಾಡಿ. ಈಗಾಗಲೇ ಖಾತೆ ಇದ್ದರೆ ನೇರವಾಗಿ ಲಾಗಿನ್ ಆಗಿ.

  • ಆಪ್‌ನ ಕೆಳಭಾಗದಲ್ಲಿರುವ 'ಸರ್ಚ್' ಐಕಾನ್ ಕ್ಲಿಕ್ ಮಾಡಿ, 'ಡ್ರೈವಿಂಗ್ ಲೈಸೆನ್ಸ್' ಎಂದು ಟೈಪ್ ಮಾಡಿ.

  • ಲಿಸ್ಟ್‌ನಲ್ಲಿ ನಿಮ್ಮ ರಾಜ್ಯದ ಸಾರಿಗೆ ಇಲಾಖೆ (ಉದಾಹರಣೆಗೆ: ಕರ್ನಾಟಕ ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ಅಥವಾ ಮಿನಿಸ್ಟ್ರಿ ಆಫ ರೋಡ್ ಟ್ರಾನ್ಸಪೋರ್ಟ್ ಆಂಡ್ ಹೈವೇಸ್ ಆಯ್ದುಕೊಳ್ಳಿ.

  • ನಿಮ್ಮ ಚಾಲನಾ ಡಿಲ್ ನಂಬರ್ ಮತ್ತು ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಿ.

  • 'ಗೆಟ್ ಡಾಕ್ಯುಮೆಂಟ್ ' ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಡಿಜಿಟಲ್ ಡಿಎಲ್ 'ಇಶ್ಯೂಡ್ ಡಾಕ್ಯುಮೆಂಟ್ಸ್ ' ವಿಭಾಗದಲ್ಲಿ ಲಭ್ಯವಾಗುತ್ತದೆ.

  • ಅಲ್ಲಿಂದ ನೀವು ಇದನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿಧಾನ 2: ಎಂ-ಪರಿವಾಹನ್ ಆಪ್ ಮೂಲಕ

  • ನೆಕ್ಸ್ಟ್‌ಜೆನ್ ಎಂ-ಪರಿವಾಹನ್ ಆಪ್ ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ.

  • ಭಾಷೆಯನ್ನು ಆಯ್ದುಕೊಂಡು, ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಪ್ರೊಫೈಲ್ ಕ್ರಿಯೇಟ್ ಮಾಡಿ.

  • ಹೋಮ್ ಸ್ಕ್ರೀನ್‌ನಲ್ಲಿರುವ 'ಡ್ರೈವಿಂಗ್ ಲೈಸೆನ್ಸ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

  • ನಿಮ್ಮ ಡಿಎಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಸರ್ಚ್ ಮಾಡಿ.

  • ನಿಮ್ಮ ಲೈಸೆನ್ಸ್ ವಿವರಗಳು ಕಾಣಿಸುತ್ತವೆ.

  • ಅದನ್ನು ನಿಮ್ಮ ವರ್ಚುವಲ್ ಐಡಿಗೆ ಸೇರಿಸಿಕೊಳ್ಳಬಹುದು.

ಇನ್ನು, ಈ ಆಪ್‌ಗಳಲ್ಲಿ ಡೌನ್‌ಲೋಡ್ ಮಾಡಿದ ಡಿಜಿಟಲ್ ಡಿಎಲ್ ಅನ್ನು ಟ್ರಾಫಿಕ್ ಪೊಲೀಸರು ಅಥವಾ ಯಾವುದೇ ಪರಿಶೀಲನೆಯ ಸಮಯದಲ್ಲಿ ತೋರಿಸಿದರೆ ಅದು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತದೆ. ಅಕಸ್ಮಾತ್, ನಿಮಗೆ ಫಿಸಿಕಲ್ ಕಾರ್ಡ್ ಬೇಕಿದ್ದಲ್ಲಿ, ನೀವು ಪರಿವಾಹನ್ ಸಾರ್ತಿ ವೆಬ್ಸೈಟ್ಗೆ ಭೇಟಿ ನೀಡಿ 'ಡೂಪ್ಲಿಕೇಟ್ ಡಿಲ್' ಗಾಗಿ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿ ಮನೆಗೇ ತರಿಸಿಕೊಳ್ಳಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!